ಚಿಂತಾಮಣಿ: ಇಲ್ಲಿನ ಜೆ.ಜೆ ಕಾಲೋನಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ನಾದಿನಿಯನ್ನು ಭೀಕರವಾಗಿ ಕೊಲೆ ಮಾಡಿದ್ದು ಪೊಲೀಸರಿಗೆ ಶರಣಾಗಿದ್ದಾನೆ.
ಕೋಲಾರ ಗಲ್ಪೇಟೆಯ ಎಜಾಜ್ (೩೦) ಕೊಲೆ ಆರೋಪಿ. ಈತನ ಪತ್ನಿ ಶಮಾ (೨೫) ಹಾಗೂ ನಾದಿನಿ ರೇಷ್ಮಾ (೧೮) ದಾರುಣವಾಗಿ ಕೊಲೆಯಾದವರು. ಶಮಾ ಹಾಗೂ ಎಜಾಜ್ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಹೆಣ್ಣು ಮಗು ಇದೆ. ಕಳೆದ ಮೂರು ತಿಂಗಳಿನಿAದಲೂ ದಂಪತಿಗಳ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿರಂತರ ಗಲಾಟೆಗಳು ನಡೆಯುತ್ತಿದ್ದವು. ಇದರ ನಡುವೆ ಕೋಪೋದ್ರಿಕ್ತನಾದ ಎಜಾಜ್ ಮನೆಯಲ್ಲಿದ್ದ ಪತ್ನಿ ಶಮಾ ಹಾಗೂ ನಾದಿನಿ ರೇಷ್ಮಾ ಇಬ್ಬರನ್ನೂ ಮಾರಕ ಆಯುಧಗಳಿಂದ ಭೀಕರವಾಗಿ ಹತ್ಯೆ ಮಾಡಿದ್ದು ಕೋಲಾರಕ್ಕೆ ಮಕ್ಕಳ ಸಮೇತ ಪರಾರಿಯಾಗಿದ್ದಾನೆ. ಹಾಗೆಯೇ ಕೋಲಾರದ ಗಲ್ಪೇಟೆ ಠಾಣೆಗೆ ಶರಣಾಗಿದ್ದಾನೆ.
ಕೊಲೆ ಘಟನೆಯ ಸ್ಥಳಕ್ಕೆ ಎಸ್ಪಿ ಕುಶಲ್ ಚೌಕ್ಸೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಭೇಟಿ ನೀಡಿ ಪರಿಶೀಲಿಸಿದ್ದು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.