ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಡಾ ಕೆ.ಸುಧಾಕರ್‌  
ಚಿಕ್ಕಬಳ್ಳಾಪುರ

ಮಾವಿನ ಹಣ್ಣುಗಳ ಬೆಲೆ ಕುಸಿತ: ರೈತರ ನೆರವಿಗೆ ಧಾವಿಸಲು ಸಂಸದರ ಮನವಿ

ಚಿಕ್ಕಬಳ್ಳಾಪುರ: ಮಾವಿನ ಹಣ್ಣಿನ ಬೇಡಿಕೆ ಹಾಗೂ ಬೆಲೆ ಕುಸಿತದಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸರ್ಕಾರದ ನೆರವು ಒದಗಿಸಬೇಕಾದ ಅಗತ್ಯತೆಯ ವಿಚಾರವಾಗಿ ಸಂಸದಡಾ ಕೆ.ಸುಧಾಕರ್‌ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ಸಿಂಗ್ಚೌಹಾಣ್ಗೆಪತ್ರ ಬರೆದಿದ್ದಾರೆ.

ಮಾವು ಬೆಳೆಗಾರರಹಿತವನ್ನು ಕಾಪಾಡಲು ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ,ಸಮಸ್ಯೆ ಬಗೆಹರಿಸಬೇಕೆಂದು ಮನವಿಮಾಡಿದ್ದಾರೆ. ವರ್ಷ ಸಮೃದ್ಧಮಾವಿನ ಇಳುವರಿ ಬಂದಿದ್ದರೂ ಸಹ ರಾಜ್ಯದಲ್ಲಿ ಸಮರ್ಪಕ ಖರೀದಿ ವ್ಯವಸ್ಥೆ, ಸಂಸ್ಕರಣಾ ಸೌಲಭ್ಯ ಮತ್ತು ಮಾರುಕಟ್ಟೆಯಲ್ಲಿಬೇಡಿಕೆ ಕುಸಿತದ ಕಾರಣದಿಂದಾಗಿ ಸೂಕ್ತ ಬೆಲೆ ಸಿಗುತ್ತಿಲ್ಲ. ದರ ಕೆ.ಜಿ.ಗೆ 4 ರೂಗಳಿಂದ 6 ರೂಗಳಿಗೆಕುಸಿದಿದೆ. ಹಗಲಿರುಳು ಬೆವರು ಸುರಿಸಿದ ಸಾವಿರಾರು ರೈತರು ಹೂಡಿದ ಕನಿಷ್ಠ ಬಂಡವಾಳ, ಕೊಯ್ಲು ಮತ್ತು ಸಾರಿಗೆ ವೆಚ್ಚವನ್ನೂ ಮರಳಿ ಪಡೆಯಲಾಗದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂಬುದಾಗಿಪತ್ರದಲ್ಲಿ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಮತ್ತು ರೈತರು ನಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(NAFED) ಮತ್ತು ಇತರೆ ಸಂಸ್ಥೆಗಳ ಮೂಲಕ ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಪ್ರಾಕೃತಿಕವಿಕೋಪದಿಂದ ಅತಿ ಹೆಚ್ಚು ಹಾನಿಗೊಳಗಾಗಿರುವ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ವಿಶೇಷ ಖರೀದಿ ವ್ಯವಸ್ಥೆಅಗತ್ಯವಿದೆ. ಆಹಾರ ಸಂಸ್ಕರಣಾ ಘಟಕಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ (FPOs) ಮೂಲಕ ಹೆಚ್ಚುವರಿ ಉತ್ಪನ್ನವನ್ನು ಮೌಲ್ಯವರ್ಧನೆಗೆ ಬಳಸಿಕೊಂಡು ಬೃಹತ್ ಪ್ರಮಾಣದ ಸಂಸ್ಕರಣೆಗೆ ಚಾಲನೆ ನೀಡಬೇಕು. ನೆರೆಯ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಮಾವು ಸಾಗಿಸಲು ಇರುವ ಸಾರಿಗೆ ಮತ್ತು ಇತರ ಅಡಚಣೆಗಳನ್ನು ನಿವಾರಿಸಿ, ಸೂಕ್ತ ಮಾರುಕಟ್ಟೆ ಸಂಪರ್ಕ ಕಲ್ಪಿಸಬೇಕು.ರಫ್ತು ಹಾಗೂ ಅಂತಾರಾಜ್ಯ ಮಾರುಕಟ್ಟೆ ವಿಸ್ತರಿಸಬೇಕುಎಂದು ಅವರು ಮನವಿ ಮಾಡಿದ್ದಾರೆ.