ತಹಸೀಲ್ದಾರ್‌ ಕಚೇರಿಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡ ಮಾಜಿ ಸೈನಿಕ ಶಿವಾನಂದರೆಡ್ಡಿ 
ಚಿಕ್ಕಬಳ್ಳಾಪುರ

ಸಿಗದ ಸ್ಪಂದನೆ, ತಹಸೀಲ್ದಾರ್‌ ಕಚೇರಿಯಲ್ಲಿಯೇ ವಿಷ ಸೇವಿಸಿದ ಮಾಜಿ ಸೈನಿಕ

ಚಿಂತಾಮಣಿ/ಚಿಕ್ಕಬಳ್ಳಾಪುರ

:

ಕಳೆದಎರಡು ದಶಕಗಳಿಂದಲೂ ಭೂಮಿ ಮಂಜೂರಾತಿ ವಿಚಾರವಾಗಿ ನಿರಂತರ ಹೋರಾಟಕ್ಕೆ ಕಂದಾಯ ಇಲಾಖೆಯಅಧಿಕಾರಿಗಳು ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಬೇಸತ್ತ ಮಾಜಿ ಸೈನಿಕರೊಬ್ಬರು ವಿಷ ಸೇವಿಸಿಆತ್ಮಹತ್ಯೆಗೆ ಯತ್ನಿಸಿದ್ದು ಕಾರ್ಗಿಲ್‌ ಯುದ್ದ ಸೇರಿದಂತೆ ಹಲವು ಯುದ್ದಗಳಲ್ಲಿ ಭಾಗವಹಿಸಿದೇಶವನ್ನು ಕಾಪಾಡುವಲ್ಲಿ ಪ್ರಾಣವನ್ನು ಪಣಕ್ಕಿಟ್ಟವರಿಗೆ ಸ್ಥಳೀಯ ಆಡಳಿತ ವ್ಯವಸ್ಥೆಯು ತೋರಿದಧೋರಣೆಗೆ ಆಕ್ರೋಶ ವ್ಯಕ್ತವಾಗಿದೆ.

ಚಿಂತಾಮಣಿಯ ತಹಶೀಲ್ದಾರ್

ಕಚೇರಿಯಲ್ಲಿ

ಆತ್ಮಹತ್ಯೆಗೆ

ಯತ್ನಿಸಿದಮಾಜಿ ಸೈನಿಕ ಶಿವಾನಂದರೆಡ್ಡಿ. ಚಿಂತಾಮಣಿ

ತಾಲೂಕಿನ

ಅಂಬಾಜಿದುರ್ಗಾ

ಹೋಬಳಿಯ

ರಾಯಪಲ್ಲಿ

ಗ್ರಾಮದವರು.ಸೈನಿಕನಾಗಿ ಕರ್ತವ್ಯ ನಿರ್ವಹಣೆಗೆ ನಿಯಮಾನುಸಾರ ಸರ್ಕಾರದಿಂದ ಜಮೀನು ಮಂಜೂರಾತಿಗಾಗಿ ಹಲವು ಬಾರಿಅಲೆದಾಡಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಿವಿಗೊಟ್ಟಿಲ್ಲ.ಇದರಿಂದ ಮನನೊಂದ ಶಿವಾನಂದರೆಡ್ಡಿ ಶುಕ್ರವಾರ ಕಚೇರಿಗೆ ಬಂದು ವಿಷ ಸೇವಿಸಿದ್ದಾರೆ.ಅಸ್ವಸ್ಥಗೊಂಡು ನೆಲದ ಮೇಲೆ ಬಿದ್ದಿದ್ದ ಮಾಜಿ ಸೈನಿಕನನ್ನು ಸ್ಥಳೀಯರು ಇಲ್ಲಿನ ಆಸ್ಪತ್ರೆಗೆದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

೧೦ ಲಕ್ಷ ರೂಗಳಿಗೆ ಬೇಡಿಕೆ, ಅಮಾನತ್‌

ಈ ಹಿಂದೆ ಕಂದಾಯ ಇಲಾಖೆಯ ಅಧಿಕಾರಿಗಳು ಚಿಂತಾಮಣಿಯಲ್ಲಿ ಸೂಕ್ತಜಾಗವನ್ನು ಗುರುತಿಸಿ, ಸರ್ಕಾರಿ ಜಮೀನು ಮಂಜೂರು ಮಾಡಲು ೧೦ ಲಕ್ಷ ರೂಗಳಿಗೆ ಒತ್ತಾಯಿಸಿದ್ದರು.ಇದರ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಲೋಕಾಯುಕ್ತರ ಬಲೆಗೆಮಧ್ಯವರ್ತಿ, ಗ್ರಾಮ ಲೆಕ್ಕಿಗ ಸೇರಿದಂತೆ ಮೂವರು ಸಿಕ್ಕಿ ಬಿದ್ದಿದ್ದರು. ಇದರ ಆರೋಪದಲ್ಲಿ ಸರ್ಕಾರಿ

ಸರ್ವೆಯರ್

ನಾಗರಾಜ್ಅಮಾನತ್‌ ಗೊಂಡಿದ್ದರು. ಇಷ್ಟಾದರೂ ಮತ್ತೆ ಅಧಿಕಾರ ವಹಿಸಿಕೊಂಡವರು ನಿಯಮಾನುಸಾರ ಅರ್ಜಿಯನ್ನುಮಾತ್ರ ಇತ್ಯರ್ಥಪಡಿಸಲಿಲ್ಲ. ಬದಲಿಗೆ ಹಲವು ಬಾರಿ ಕಚೇರಿಗೆ ಅಲೆದಾಡಿಸಿ ಮಾಜಿ ಸೈನಿಕನಿಗೆಕಿರುಕುಳ ನೀಡಿದ್ದಾರೆ. .

ನಿಲ್ಲದ ಹೋರಾಟ

ಕಳೆದ ಹಲವು ವರ್ಷಗಳಿಂದಲೂ ಜಮೀನು

ಮಂಜೂರಾತಿಗೆ ಆಗ್ರಹಿಸಿ,

ಶಿವಾನಂದರೆಡ್ಡಿ

ಅಮರಣಾಂತ

ಉಪವಾಸ

ಸತ್ಯಾಗ್ರಹ, ವಿವಿಧ ಹಂತದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆಸೇರಿದಂತೆ ನಾನಾ ರೀತಿಯ ಹೋರಾಟಗಳನ್ನು ನಡೆಸಿದ್ದಾರೆ. ಇದರ ನಡುವೆ ಲಂಚಕೋರ

ಅಧಿಕಾರಿಗಳನ್ನು

ಲೋಕಾಯುಕ್ತಗೆ

ಹಿಡಿದುಕೊಟ್ಟಿದ್ದೆ

ತಪ್ಪಾಯ್ತುಎನ್ನುವ ಭಾವನೆಯಲ್ಲಿರುವಂತೆ ಆಡಳಿತ ಯಂತ್ರಾಂಗವು ನಿರ್ಲಕ್ಷ್ಯ ಧೋರಣೆಯನ್ನು ಪ್ರದರ್ಶಿಸುತ್ತಿದೆ.

ಕರ್ತವ್ಯ ನಿರ್ವಹಣೆ ವೇಳೆ ಗಾಯ

೨೦೦೪ ರಲ್ಲಿ ಜಮ್ಮು

ಕಾಶ್ಮಿರದ

ವ್ಯಾಲಿಯಲ್ಲಿ

ಕರ್ತವ್ಯ

ನಿರ್ವಹಿಸುವಾಗ

ನಡೆದ

ಅವಘಡವೊಂದರಲ್ಲಿ ಬಿ

.

ಎಸ್

.

ಎಫ್‌ಯೋಧರಾಗಿದ್ದ

ಶಿವಾನಂದರೆಡ್ಡಿಗಂಭೀರವಾಗಿ

ಗಾಯಗೊಂಡಿದ್ದರು. ಮೂಲತಃ

ಕೃಷಿ

ಕುಟುಂಬಸ್ಥರು.ಇವರಿಗೆ ನಿಯಮಾವಳಿಯಂತೆ

ಮಾಜಿ

ಸೈನಿಕರ

ಕೋಟಾದಡಿ

5

ಎಕರೆ

ಜಮೀನು

ಮಂಜೂರು

ಮಾಡಲುಸ್ವತಃ

ಮಿಲಿಟರಿ

ಅಧಿಕಾರಿಗಳು

ಮನವಿ

ಮಾಡಿದ್ದರು.