ಬಾಗೇಪಲ್ಲಿ ತಾಲೂಕು ಬಿಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಆಲ್ ಹ್ಯಾಂಡ್ಸ್ ಟುಗೆದರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ನ ಸದಸ್ಯ ಕೆ.ಪಿ.ಚಂದ್ರಶೇಖರ್ ಮತ್ತು ಸ್ನೇಹಿತರು ಕೊಡುಗೆಯಾಗಿ ನೀಡಿದ ನಿಘಂಟನ್ನು ವಿದ್ಯಾರ್ಥಿಗಳು ಪಡೆದರು. ಪ್ರಭಾರ ಮುಖ್ಯಶಿಕ್ಷಕ ಎನ್.ಆರ್.ಕುಮಾರ್, ಶಿಕ್ಷಕಿ ವೇಣಿಬಾಯಿ, ಸುನಿಲ್ಕುಮಾರ್ ಇದ್ದರು.
ವಿಜಯವಾಣಿ ಸುದ್ದಿಜಾಲ ಪಾತಪಾಳ್ಯ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಲು ಇಂಗ್ಲಿಷ್ ಕಲಿಕೆ ಅನಿವಾರ್ಯ ಎಂದು ಬಿಳ್ಳೂರು ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಎನ್.ಆರ್.ಕುಮಾರ್ ತಿಳಿಸಿದರು.
ಬಾಗೇಪಲ್ಲಿ ತಾಲೂಕು ಬಿಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಬೆಂಗಳೂರಿನ ಆಲ್ ಹ್ಯಾಂಡ್ಸ್ ಟುಗೆದರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ನ ಸದಸ್ಯ ಕೆ.ಪಿ.ಚಂದ್ರಶೇಖರ್ ಮತ್ತು ಸ್ನೇಹಿತರು ಕೊಡುಗೆಯಾಗಿ ನೀಡಿದ ನಿಘಂಟು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ಆತ್ಮವಿಶ್ವಾಸದಿಂದ ಕಲಿತರೆ ಸುಲಭ. ಇಂಗ್ಲೀಷ್ ಕಲಿತರೆ ಕೀಳರಿಮೆ ಹೋಗುತ್ತದೆ. ವಿಶ್ವದ ಯಾವುದೇ ದೇಶದ ಜನರೊಂದಿಗೆ ವ್ಯವಹರಿಸಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಕಿ ವೇಣಿಬಾಯಿ ಮಾತನಾಡಿ, ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಕಲಿಸಿದರೆ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸಿದ್ಧರಾಗುತ್ತಾರೆ ಎಂದರು.
ಶಿಕ್ಷಕ ಸುನಿಲ್ಕುಮಾರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್ ಸುಲಭವಾಗಿ ಕಲಿಯಲಿ ಎಂಬ ಉದ್ದೇಶದಿಂದ ಬೆಂಗಳೂರಿನ ಆಲ್ ಹ್ಯಾಂಡ್ಸ್ ಟುಗೆದರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ನ ಸದಸ್ಯ ಕೆ.ಪಿ.ಚಂದ್ರಶೇಖರ್ ಮತ್ತು ಸ್ನೇಹಿತರು ಕೊಡುಗೆಯಾಗಿ ನಿಘಂಟು ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು. ಅತಿಥಿ ಶಿಕ್ಷಕರಾದ ರಿಹಾನ, ಶ್ರೀಲೇಖಾ, ರಮೇಶ್, ವಿದ್ಯಾರ್ಥಿಗಳಿದ್ದರು.