ಚಿಂತಾಮಣಿ: ಬೈಕ್ಗೆ ಬೊಲೆರೋ ಡಿಕ್ಕಿಯಾಗಿ ಜಂಗಮಶೀಗೆಹಳ್ಳಿಯ ಮುನಿಯಪ್ಪ (65 ) ಗಂಭೀರ ಗಾಯಗೊಂಡಿದ್ದಾರೆ.
ಮುನಿಯಪ್ಪ ಆ.6ರಂದು ಬೈಕ್ನಲ್ಲಿ ಕೈವಾರ ಕ್ರಾಸ್ಗೆ ಹೋಗಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದಾಗ ಕೈಗಾರಿಕಾ ಪ್ರದೇಶದ ತಿರುವಿನಲ್ಲಿ ಚಿಂತಾಮಣಿ ಕಡೆಯಿಂದ ಅತಿವೇಗವಾಗಿ ಬಂದ ಬೊಲೆರೋ ಬೈಕ್ಗೆ ಡಿಕ್ಕಿಯಾಗಿದೆ.
ಮುನಿಯಪ್ಪ ಅವರ ಬಲ ಕಾಲು ಹಾಗೂ ತಲೆಗೆ ಗಾಯಗಳಾಗಿವೆ. ಸ್ಥಳಿಯರು ಎಚ್.ಕ್ರಾಸ್ ಗ್ರಾಮದ ಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.