ಚಿಕ್ಕಬಳ್ಳಾಪುರ: ಇಲ್ಲಿನ ಕಡಶೀಗೆನಹಳ್ಳಿಯಲ್ಲಿ ಬಾವಿಗೆಬಿದ್ದಿದ್ದ ಶ್ವಾನವನ್ನು ರಕ್ಷಿಸಿ, ಆರೈಕೆ ಮಾಡಿದ್ದಾರೆ.
ಗ್ರಾಮದ ಕೃಷ್ಣಮ್ಮ ಎಂಬುವವರಹೊಲದಲ್ಲಿನ 30 ಅಡಿಆಳದ ತೆರೆದಬಾವಿಗೆ
ಆಕಸ್ಮಿಕವಾಗಿ ನಾಯಿಬಿದ್ದಿತ್ತು. ಇದರ ಬಗ್ಗೆ ಸ್ಥಳೀಯ ನಿವಾಸಿಗಳುಚಿಕ್ಕಬಳ್ಳಾಪುರ ಅಗ್ನಿಶಾಮಕಠಾಣೆಯ ನಿಯಂತ್ರಣಕೊಠಡಿಗೆ ದೂರವಾಣಿಗೆಕರೆ ಮಾಡಿ,ಮಾಹಿತಿ ನೀಡಿದರು. ಇದರಿಂದ ತಕ್ಷಣ ಜಲವಾಹನದೊಂದಿಗೆಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕತಂಡವು ಬರೋಬ್ಬರಿ 1.30 ಗಂಟೆಕಾರ್ಯಾಚರಣೆಯ ಮೂಲಕ ನಾಯಿಯನ್ನು ರಕ್ಷಿಸಿದೆ.
ಹಗ್ಗಗಳ ಸಹಾಯದಿಂದಕೆಳಗಿಳಿದ ಸಿಬ್ಬಂದಿ ಸುರಕ್ಷಿತವಾಗಿ ಮೂಕಜೀವಿಯನ್ನು ಮೇಲಕ್ಕೆತೆಗೆದುಕೊಂಡು ಬರುತ್ತಿದ್ದಂತೆ ಗ್ರಾಮಸ್ಥರು ಶಿಳ್ಳೆಗಳನ್ನು ಹಾಕಿ ಸಂತಸ ವ್ಯಕ್ತಪಡಿಸಿದರು.
ಅಗ್ನಿಶಾಮಕ ದಳದ ರವೀಂದ್ರ ಸಂಗಮನೇತೃತ್ವದಲ್ಲಿ ಸಿಬ್ಬಂದಿಮಡಿವಾಳರ ಬಸವರಾಜ,ರಾಜು ಮುರಕುಟ್ಟಿ,ದತ್ತಾತ್ರೇಯ,ಬೋರಗಾವಿಯಶಸ್ವಿ ಕಾರ್ಯಾಚರಣೆ ಕೈಗೊಂಡಿದ್ದಾರೆ.