ಚಿಂತಾಮಣಿ ತಾಪಂ ಸಭಾಂಗಣದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಕಂದಾಯ ಇಲಾಖೆಯಿಂದ 94 ಸಿ ಹಕ್ಕುಪತ್ರ ವಿತರಿಸಿದರು. ತಹಸೀಲ್ದಾರ್ ಸುದರ್ಶನ್ ಯಾದವ್, ತಾಪಂ ಇಒ ಎಸ್.ಆನಂದ್, ಕೃಷಿಕ ಸಮಾಜದ ಜಯರಾಮರೆಡ್ಡಿ, ದರಖಾಸ್ತು ಸಮಿತಿ ಅಧ್ಯಕ್ಷ ಚೌಡಪ್ಪ, ಕುರುಟಹಳ್ಳಿ ಕೃಷ್ಣಮೂರ್ತಿ, ಎಜಾಜ್, ಬುಕ್ಕನಹಳ್ಳಿ ಶಿವಣ್ಣ, ಮಸಲಹಳ್ಳಿ ಶಿವಾರೆಡ್ಡಿ ಇದ್ದರು.
- ಸಚಿವ ಡಾ.ಎಂ.ಸಿ.ಸುಧಾಕರ್ ಮಾಹಿತಿ
- 561 ಅರ್ಜಿಗಳಿಗೆ ಸಮ್ಮತಿ
- ದರಖಾಸ್ತು ಸಮಿತಿ
ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಸಮಯದ ಅಭಾವದಿಂದ 128 ಜನರಿಗೆ ಹಕ್ಕುಪತ್ರಗಳು ವಿತರಿಸುತ್ತಿರುವುದಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಇತ್ತೀಚಗೆ ಹಮ್ಮಿಕೊಂಡಿದ್ದ ದರಖಾಸ್ತು ಸಮಿತಿ ಸಭೆಯಲ್ಲಿ ಕಂದಾಯ ಇಲಾಖೆಯ 94ಸಿ ಹಕ್ಕು ಪತ್ರ ವಿತರಿಸಿ ಮಾತನಾಡಿ, 2,220 ಅರ್ಜಿಗಳಲ್ಲಿ 561 ಅರ್ಜಿಗಳು ಮಂಜೂರಾಗಿದ್ದು, 1317 ಅರ್ಜಿಗಳು ತಿರಸತವಾಗಿವೆ. ಕೆಲವರು ಸರಿಯಾದ ದಾಖಲಾತಿ ನೀಡಿಲ್ಲ, ಕೆಲವರ ಕಡತ ಕಾಣೆಯಾಗಿದ್ದರಿಂದ ತಹಸೀಲ್ದಾರರು ದಾಖಲಾತಿ ಸರಿಯಾದ ಮಾಹಿತಿ ನೀಡುವಂತೆ ಸೂಚಿಸಿದರು.
2004ರಲ್ಲಿ ಸರ್ಕಾರಿ ಜಾಗ, ಬೆಟ್ಟ ಗುಡ್ಡಗಳಲ್ಲಿ ಜಮೀನು ಇಲ್ಲದೆ, ಜಮೀನಿದ್ದರು ಸರಿಯಾದ ದಾಖಲಾತಿ ಇಲ್ಲದೆ ಪರದಾಡುತ್ತಿದ್ದರು. ಎಸ್.ಎಂ.ಕೃಷ್ಣ ಸರ್ಕಾರದೊಂದಿಗೆ ಚರ್ಚಿಸಿ 94ಸಿ ಹಕ್ಕುಪತ್ರ ಯೋಜನೆಯಡಿ ಜನರಿಗೆ ಸ್ವಂತ ಜಾಗಗಳಲ್ಲಿ ಮನೆ ಕಟ್ಟಲು ಸಹಾಯ ಮಾಡಿದ್ದಾರೆ. 2012ರೊಳಗೆ ನಿರ್ಮಿಸಿದ ಮನೆಗಳಿಗೆ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ. ತಹಸೀಲ್ದಾರರ ಸಹಯೋಗದಿಂದ ಹಕ್ಕುಪತ್ರ ವಿತರಣೆ, ದಾಖಲೆ ಪರಿಶೀಲನೆ ಕಾರ್ಯ ಜಾರಿಯಾಗಿವೆ.
ಕ್ಷೇತ್ರದಲ್ಲಿ ವಿವಿಧ ವಸತಿ ಶಾಲೆ, ಶಿಕ್ಷಣ ಕೇಂದ್ರಗಳ ನಿಮಾರ್ಣಕ್ಕೆ ಭೂಮಿ ನಿಗದಿ, ಯೋಜನೆ. ಗ್ರಾಮೀಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ. ಗ್ರಾಮೀಣ, ನಗರ ರಸ್ತೆ ಅಭಿವೃದ್ಧಿ ಕಾರ್ಯಗಳ ಪ್ರಗತಿ, ಹಿರಿಯ ನಾಗರಿಕರಿಗಾಗಿ ಜಾಗ ನಿಗದಿ, ಆಸ್ಪತ್ರೆ, ತಾಪಂ ಕಚೇರಿ, ಪ್ರವಾಸಿ ಮಂದಿರ, ನ್ಯಾಯಾಲಯ, ಖಾಸಗಿ ಬಸ್ ನಿಲ್ದಾಣ, ಕೈಗಾರಿಕೆ ಪ್ರದೇಶಗಳ ವಿಸ್ತರಣೆ, ಶಾಲಾ ಕಾಲೇಜು ಮತ್ತಿತರ ಅಭಿವೃದ್ಧಿ ವಿಷಯಗಳ ಬಗ್ಗೆ ವಿವರಿಸಿದರು.