ಗೌರಿಬಿದನೂರು ತಾಲೂಕಿನ ಮುತ್ತುರಾಯನಹಳ್ಳಿ ಹಾಗೂ ಸಾಗಾನಹಳ್ಳಿಯ ಮಹಿಳೆಯರು ಗ್ರಾಮ ದೇವತೆಗಳಿಗೆ ದೀಪದಾರತಿ ಮಾಡಲು ಮೆರವಣಿಗೆಯಲ್ಲಿ ತೆರಳಿದರು. 
ಚಿಕ್ಕಬಳ್ಳಾಪುರ

ಗ್ರಾಮ ದೇವತೆಗಳಿಗೆ ದೀಪದಾರತಿ

ಗೌರಿಬಿದನೂರು:

ತಾಲೂಕಿನ ಮುತ್ತುರಾಯನಹಳ್ಳಿ ಹಾಗೂ ಸಾಗಾನಹಳ್ಳಿಯ ಗ್ರಾಮ ದೇವತೆಗಳಿಗೆ ಮಹಿಳೆಯರು ದೀಪದಾರತಿ ಮಾಡಿದರು.

ದೀಪೋತ್ಸವದ ಅಂಗವಾಗಿ ಮುತ್ತುರಾಯನಸ್ವಾಮಿ, ಶ್ರೀ ಲ್ಮನರಸಿಂಹಸ್ವಾಮಿ ಹಾಗೂ ಸಪ್ಪಲಮ್ಮ ದೇವಸ್ಥಾನವನ್ನು ತಳಿರು& ತೋರಣ ಹಾಗೂ ವಿದ್ಯುತ್​ ದೀಪಾಲಂಕಾರ ಮಾಡಲಾಗಿತ್ತು. ಮಹಿಳೆಯರು ತಂಬಿಟ್ಟಿನ ದೀಪಗಳನ್ನು ಹೊತ್ತು ತಮಟೆ ವಾದ್ಯಗಳೊಂದಿಗೆ ಸಾಗಿ ಸೋಮವಾರ ಶ್ರೀಲ್ಮನರಸಿಂಹಸ್ವಾಮಿ ಹಾಗೂ ಮುತ್ತುರಾಯನಸ್ವಾಮಿಗೆ ಬೆಳಗಿ, ಮಂಗಳವಾರ ಸಪ್ಪಲಮ್ಮಗೆ ದೀಪ ಬೆಳಗಲಾಯಿತು.
ದೀಪೋತ್ಸವದ ಕಾರ್ಯಗಳನ್ನು ಶ್ರೀಸಪ್ಪಲಮ್ಮ ದೇವಿಯ ಅರ್ಚಕ ಕೃಷ್ಣಪ್ಪ ಹಾಗೂ ಪರಮೇಶ ಸ್ವಾಮೀಜಿ ನೆರೆವೇರಿಸಿದರು. ಇದಕ್ಕೂ ಮುನ್ನ ಗ್ರಾಮದ ಶಾಲಾ ಮೈದಾನದಲ್ಲಿ ಕುರುೇತ್ರ ಪೌರಾಣಿಕ ನಾಟಕವನ್ನು ಗ್ರಾಮದ ಕಲಾವಿದರು ಪ್ರದರ್ಶನ ಮಾಡಿದರು.ಗ್ರಾಮಸ್ಥರಾದ ಸಾಗಾನಹಳ್ಳಿ ಶಿವಕುಮಾರ್​, ಕಂಬಾಲು ನಾಗರಾಜು, ದ್ಯಾವರಹಳ್ಳಿ ಶೀನಪ್ಪ, ಬಡಗಿ ಗಂಗಾಧರಪ್ಪ ಇದ್ದರು.