ಗೌರಿಬಿದನೂರು ತಾಲೂಕಿನ ಬಂದರಹಳ್ಳಿಯಲ್ಲಿನ ನೂತನ ಡೇರಿಯಲ್ಲಿ ಶಾಸಕ ಕೆ.ಎಚ್​. ಪುಟ್ಟಸ್ವಾಮಿ ಗೌಡ ಹಾಲಿನ ಗುಣಮಟ್ಟ ಪರಿಶೀಲಿಸಿದರು. ಕೋಚಿಮುಲ್​ ಮಾಜಿ ಅಧ್ಯಕ್ಷ ಜೆ.ಕಾಂತರಾಜು, ಮುಖಂಡರಾದ ಜಿ.ಬೊಮ್ಮಣ್ಣ, ವಿಜಯ್​, ಪ್ರಕಾಶ್​ ಇದ್ದರು. 
ಚಿಕ್ಕಬಳ್ಳಾಪುರ

ಬಡ ಕುಟುಂಬಗಳಿಗೆ ಹೈನುಗಾರಿಕೆ ಆಧಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪುಟ್ಟಸ್ವಾಮಿ ಗೌಡ ಹೇಳಿಕೆ
  • ಬಂದರಹಳ್ಳಿಯಲ್ಲಿ ಡೇರಿ ಉದ್ಘಾಟನೆ
  • ದೇಶ ದಾಟಿ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪುತ್ತಿರುವುದು ಕಡಿಮೆ ಸಾಧನೆಯಲ್ಲ.
ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಬಯಲು ಸೀಮೆಗೆ ಸೇರಿದ ಈ ಭಾಗದಲ್ಲಿ ಬಡ, ಮಧ್ಯಮ ಕುಟುಂಬಗಳಗೆ ಹೈನುಗಾರಿಕೆ ಪ್ರಮುಖ ಆಧಾರವಾಗಿದೆ ಎಂದು ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ಹೇಳಿದರು. ತಾಲೂಕಿನ ಗೆದರೆ ಗ್ರಾಪಂ ವ್ಯಾಪ್ತಿಯ ಬಂದರಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಡೇರಿ ಉದ್ಘಾಟಿಸಿ ಮಾತನಾಡಿದರು.
ಈ ಭಾಗದಲ್ಲಿ ಶಾಶ್ವತ ನದಿ ನಾಲೆಗಳಿಲ್ಲ. ಮಳೆ ಆಶ್ರಯ, ಕೊಳವೆ ಬಾವಿಗಳಿಂದ ಅಂತರ್ಜಲ ತೆಗೆದು ಕೃಷಿ ೇತ್ರದಲ್ಲಿ ರೈತರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಬೆಳೆಯುವ ತರಕಾರಿ, ಫಲ ಪುಷ್ಪಗಳು ದೇಶ ದಾಟಿ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪುತ್ತಿರುವುದು ಕಡಿಮೆ ಸಾಧನೆಯಲ್ಲ. ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿದರೆ ಮತ್ತಷ್ಟು ಸಾಧನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಗಳು ಶ್ರಮಿಸುತ್ತಿವೆ.ಎತ್ತಿನ ಹೊಳೆ ಯೋಜನೆ ನೀರು ಬಂದಲ್ಲಿ ಈ ಭಾಗದ ಎಲ್ಲ ಕೆರೆಗಳು ತುಂಬಲಿದ್ದು, ಅಂತರ್ಜಲಮಟ್ಟ ವೃದ್ಧಿಯಾಗಲಿದೆ. 2 ವರ್ಷಗಳಲ್ಲಿ ನೀರು ಬರುವ ವಿಶ್ವಾಸವಿದೆ ಎಂದರು.
ಮಹಿಳೆಯರು ಹೆಚ್ಚಾಗಿ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುತಿರುವುದು ಆಶಾದಾಯಕ ಬೆಳವಣಿಗೆ. ಸಹಕಾರ ಸಂಗಳು ಸರ್ಕಾರ ಮತ್ತು ಜನರ ನಡುವೆ ಸೇತುವೆಯಿದ್ದಂತೆ. ಜನಪ್ರತಿನಿಧಿಗಳು ಪಾರದರ್ಶಕ ಆಡಳಿತ ನಡೆಸುವ ಮೂಲಕ ಅವುಗಳನ್ನು ಆರ್ಥಿಕ ಪ್ರಗತಿಯ ಹಾದಿಯಲ್ಲಿ ಕೊಂಡೋಯ್ಯಬೇಕು ಎಂದರು.
ಕೋಚಿಮುಲ್​ ಮಾಜಿ ಅಧ್ಯಕ್ಷ ಜೆ.ಕಾಂತರಾಜು ಮಾತನಾಡಿ, ಕರ್ನಾಟಕ ಹೈನೋದ್ಯಮದಲ್ಲಿ ಇಡೀ ದೇಶದಲ್ಲಿ ಖ್ಯಾತಿ ಗಳಿಸಿದೆ. ಕೆಎಂಎ್​ ಹಾಲು, ಇನ್ನಿತರ ಉತ್ಪನ್ನಗಳು ಗಡಿ ಕಾಯುವ ಸೈನಿಕರು ಸೇರಿ ದೇಶದ ಮೂಲೆ ಮೂಲೆಗೆ ತಲುಪುತ್ತಿವೆ. ನಂದಿನಿ ದೇಶದ ವಿಶ್ವಾಸರ್ಹ ಬ್ರಾಂಡ್​ ಆಗಿ ಹೆಸರು ಸಂಪಾದಿಸಿದೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿರುವುದೇ ಇದಕ್ಕೆಲ್ಲ ಕಾರಣ. ಯಾವುದೇ ಕಾರಣಕ್ಕೂ ತಾತ್ಕಾಲಿಕ ಲಾಭದ ಆಸೆಗೆ ಬಿದ್ದು ಖಾಸಗಿ ಡೇರಿಗಳನ್ನು ಪ್ರೋತ್ಸಾಹಿಸಬಾರದು ಎಂದರು.
ಡೇರಿ ಅಧ್ಯಕ್ಷ ನರಸಿಂಹಮೂರ್ತಿ, ಡಾ.ನರೇಂದ್ರ ಬೂದಿಹಾಳ್​, ಮಂಜುನಾಥ್​, ಸಚಿನ್​, ಕಿರಣ್​, ಮುಖಂಡರಾದ ಜಿ.ಬೊಮ್ಮಣ್ಣ, ಮಂಜುನಾಥ್​, ಪ್ರಕಾಶ್​ ಮತ್ತಿತರರು ಇದ್ದರು.