ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೈತ್ರೆಯ ಕಲ್ಯಾಣ ಮಂಟಪದ ಕಾಮಗಾರಿಯಲ್ಲಿ ಪೂರ್ಣಾವಧಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು. ವಿದುರಾಶ್ವತ್ಥ ಬ್ರಾಹ್ಮಣ ಸೇವಾ ಟ್ರಸ್ಟ್​ ಅಧ್ಯ ಡಿ.ವಿ.ರಾಜೇಂದ್ರ ಪ್ರಸಾದ್​, ಗೌರಿಬಿದನೂರು ಬ್ರಾಹ್ಮಣ ಸಂದ ಅಧ್ಯ ರುಬಾಬು, ಉಪ್ಪೇಂದ್ರ ಸ್ವಾಮಿ, ಸಂದ ಕಾರ್ಯದರ್ಶಿ ಬಿ.ಅಶ್ವತ್ಥನಾರಾಯಣರಾವ್​, ಡಿ.ಎಸ್​.ಗುರುರಾಜಾರಾವ್​, ಎಂ.ಎಸ್​.ಸುಬ್ಬರಾವ್​ ಇತರರು ಇದ್ದರು.  
ಚಿಕ್ಕಬಳ್ಳಾಪುರ

ಮಕ್ಕಳಲ್ಲಿ ಹಿಂದೂ ಸಂಸತಿ ಅರಿವು ಮೂಡಿಸಿರಿ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಲ್ಲಿ ಹಿಂದೂ ಸಂಸತಿ ಅರಿವು ಮೂಡಿಸಿರಿ
ಗೌರಿಬಿದನೂರು:ಭಾರತೀಯ ಸಂಸತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಮಕ್ಕಳನ್ನು ಹಿಂದೂ ಸಂಸತಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಆ ಮೂಲಕ ತಾಯಂದಿರು ಮಕ್ಕಳಿಗೆ ಸಂಸತಿಯ ಅರಿವು ಮೂಡಿಸಬೇಕು ಎಂದು ವಿದುರಾಶ್ವತ್ಥ ಬ್ರಾಹ್ಮಣ ಸೇವಾ ಟ್ರಸ್ಟ್​ಅಧ್ಯ ಡಿ.ವಿ.ರಾಜೇಂದ್ರ ಪ್ರಸಾದ್​ ಹೇಳಿದರು.
ತಾಲೂಕಿನ ವಿದುರಾಶ್ವತ್ಥದಲ್ಲಿ ನೂತನವಾಗಿ ನಿರ್ಮಿಸಿರುವ ಮೈತ್ರೆಯ ಕಲ್ಯಾಣ ಮಂಟಪದ ನಿರ್ಮಾಣದಲ್ಲಿ ಪೂರ್ಣಾವಧಿ ಕಾಲ ತೊಡಗಿಸಿಕೊಂಡವರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ಸಮುದಾಯವು ಈ ರೀತಿಯಲ್ಲಿ ಮುಂಚೂಣಿಗೆ ಬರಲು ಸಮಿತಿಯ ಸದಸ್ಯರ ಅಪಾರವಾದ ಶ್ರಮ ಅಡಗಿದೆ ಎಂದರು.
ಮುಂದಿನ ದಿನಗಳಲ್ಲಿ ವಿದುರಾಶ್ವತ್ಥಕ್ಕೆ ಬರುವ ಯಾತ್ರಿಕರಿಗೆ ಯಾವುದೇ ರೀತಿಯಲ್ಲಿ ಪ್ರಸಾದಕ್ಕೆ ತೊಂದರೆಯಾಗದಂತೆ ಮೈತ್ರೆಯ ಕಲ್ಯಾಣ ಮಂಟಪದಲ್ಲಿ ದಾನಿಗಳ ನೆರವಿನಿಂದ ನಿತ್ಯ ಅನ್ನದಾನ ಏರ್ಪಡಿಸಲಾಗುವುದು ಎಂದರು.
ಬ್ರಾಹ್ಮಣ ಸಂದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುವುದು. ಹಾಗೆಯೇ ಸಮುದಾಯದಲ್ಲಿ ಕೆಲ ಕುಟುಂಬದವರಿಗೆ ಔಷಧ ಖರೀದಿಸಲು ಸಹ ಸಾಧ್ಯವಾಗದ ಜನರಿದ್ದು. ಅಂತಹವರಿಗೆ ವಾರ್ಷಿಕ 10 ಸಾವಿರ ರೂ. ಆರ್ಥಿಕ ಸಹಾಯ ಒದಗಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರಿಬಿದನೂರು ಬ್ರಾಹ್ಮಣ ಸಂದ ಅಧ್ಯ ರುಬಾಬು, ಉಪ್ಪೇಂದ್ರ ಸ್ವಾಮಿ,
ಸಂದ ಕಾರ್ಯದರ್ಶಿ ಬಿ.ಅಶ್ವತ್ಥನಾರಾಯಣರಾವ್​, ಡಿ.ಎಸ್​.ಗುರುರಾಜಾರಾವ್​, ಎಂ.ಎಸ್​.ಸುಬ್ಬರಾವ್​, ಜಿ.ಗುರುರಾಜರಾವ್​, ಎಲ್​.ಸತ್ಯನಾರಾಯಣರಾವ್​, ಡಿ.ಎಸ್​.ಗಂಗಾಧರಯ್ಯ, ಡಿ.ಕೆ.ಅಶ್ವತ್ಥಕುಮಾರ್​, ಡಿ.ಆರ್​.ಶ್ರೀನಿವಾಸರಾವ್​, ಡಿ.ಜಿ.ಅಶ್ವತ್ಥನಾರಾಯಣರಾವ್​, ಸಮುದಾಯದ ಹಿರಿಯರು ಮತ್ತಿತರರು ಭಾಗವಹಿಸಿದ್ದರು.