ಗೌರಿಬಿದನೂರು ತಾಲೂಕಿನ ಮಿಟ್ಟೇನಹಳ್ಳಿಯಲ್ಲಿ ಗ್ರಾಮದ ಮಹಮದ್ ಅಕ್ರಂ ಹಾಗೂ ಮಹಮದ್ ಗೌಸ್ ಫೀರ್ ಶಿಕ್ಷೆಗೆ ಗುರಿಯಾದವರು.
ಚಿಕ್ಕಬಳ್ಳಾಪುರ: ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರಿಗೆ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಗೌರಿಬಿದನೂರು ತಾಲೂಕಿನ ಮಿಟ್ಟೇನಹಳ್ಳಿಯಲ್ಲಿ ಗ್ರಾಮದ ಮಹಮದ್ ಅಕ್ರಂ(50) ಹಾಗೂ ಮಹಮದ್ ಗೌಸ್ ಫೀರ್(19) ಶಿಕ್ಷೆಗೆ ಗುರಿಯಾದವರು.
ಗೌರಿಬಿದನೂರು ತಾಲೂಕಿನ ಮಿಟ್ಟೇನಹಳ್ಳಿಯಲ್ಲಿ ಶಬಾನ ಎಂಬುವರಿಗೆ ಸೇರಿದ ಜಾಗದಲ್ಲಿ ಮನೆ ಕಟ್ಟಲು ಪಾಯ ಹಾಕಲಾಗಿತ್ತು. ಆ ಜಾಗದಲ್ಲಿ ನೆರೆ ಮನೆಯವರಾದ ಅಕ್ರಂ ಹಾಗೂ ಗೌಸ್ ಫೀರ್ ಬಟ್ಟೆ ಒಣಗಿಹಾಕಲು ಹಗ್ಗ ಕಟ್ಟಿದ್ದರು. ಓಡಾಡಲು ತೊಂದರೆಯಾಗುತ್ತದೆ ಹಗ್ಗ ತೆಗೆದು ಹಾಕಿ ಎಂದಿದ್ದಕ್ಕೆ ಜಗಳ ಪ್ರಾರಂಭವಾಗಿತ್ತು. ಮಧ್ಯೆ ಪ್ರವೇಶಿಸಿದ ಶಬಾನ ಮಗ ಮನ್ಸೂರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವೃತ್ತ ನಿರೀಕ್ಷಕ ಸತ್ಯನಾರಾಯಣ ನೇತೃತ್ವದಲ್ಲಿ ಪಿಎಸ್ಐಗಳಾದ ಭಾಸ್ಕರ್, ಲಲಿತಮ್ಮ, ಎಎಸ್ಐ ಆಂಜನಪ್ಪ, ಮುಖ್ಯ ಪೇದೆಗಳಾದ ರಿಜ್ವಾನ್, ಶ್ರೀನಿವಾಸ ರೆಡ್ಡಿ, ಅಶ್ವಥ್, ಶೇಖಪ್ಪ ಗುರಿಕಾರ್ರನ್ನು ಒಳಗೊಂಡ ತನಿಖಾ ತಂಡ ಆರೋಪಿಗಳನ್ನು ಬಂಧಿಸಿತ್ತು. ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಶ್ರೀಧರ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಢ ವಿಧಿಸಿ ತೀರ್ಪು ನೀಡಿದ್ದಾರೆ.