ಶಿಡ್ಲಘಟ್ಟ: ಇಲ್ಲಿನಚಿಕ್ಕತೇಕಹಳ್ಳಿಯಲ್ಲಿ ವಾಂತಿ-ಭೇದಿಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದ 17 ಜನರು ಚಿಕಿತ್ಸೆಯಿಂದಚೇತರಿಸಿಕೊಂಡಿದ್ದಾರೆ.
ಗ್ರಾಮದಲ್ಲಿಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಘಟಕವುಪೂರೈಕೆಯ ಕುಡಿಯುವ ನೀರಿನಲ್ಲಿ E-Coli ಬ್ಯಾಕ್ಟೀರಿಯಾಕಂಡು ಬಂದಿದ್ದು ಇದನ್ನು ಸೇವಿಸಿದ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಎನ್ನುವುದು ತನಿಖೆಯಲ್ಲಿತಿಳಿದು ಬಂದಿದೆ.
ಕಳೆದ ಜು.2 ರಂದು ಹಲವರು ಅನಾರೋಗ್ಯಕ್ಕೀಡಾದ ಪ್ರಕರಣಗಳುವರದಿಯಾಗುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿ, ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು ಜಿಲ್ಲಾ ಆರೋಗ್ಯಮತ್ತು ಕುಟುಂಬಕಲ್ಯಾಣ ಇಲಾಖೆ,ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು,ಗ್ರಾಮೀಣ ಕುಡಿಯುವನೀರು ಮತ್ತುನೈರ್ಮಲ್ಯ ವಿಭಾಗಹಾಗೂ ಜಿಲ್ಲಾನೀರು ಗುಣಮಟ್ಟಪರೀಕ್ಷಾ ಪ್ರಯೋಗಾಲಯದತಜ್ಞರನ್ನು ಒಳಗೊಂಡಸಮಿತಿಯನ್ನು ರಚಿಸಿತನಿಖೆ ನಡೆಸಲಾಗಿತ್ತು.
ಗ್ರಾಮದ ನಿವಾಸಿಶ್ರೀನಿವಾಸ್ ಯಾವುದೇಪ್ರಾಧಿಕಾರದಿಂದ ಅನುಮತಿಪಡೆಯದೇ 20 ಲೀಟರ್ಕ್ಯಾನ್ಗಳಲ್ಲಿಕುಡಿಯುವ ನೀರನ್ನುಮಾರಾಟ ಮಾಡುತ್ತಿರುವುದುಬೆಳಕಿಗೆ ಬಂದಿದೆ.ಇದನ್ನು ಚಿಂತಾಮಣಿ ತಾಲೂಕಿನಚಂಗವಾರಹಳ್ಳಿಯ ಖಾಸಗಿ ಶುದ್ಧೀಕರಣಘಟಕದಿಂದ ಖರೀದಿಸುತ್ತಿದ್ದರು.ಇದೇ ವೇಳೆ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಲಾಗಿದೆ. ಇದೇ ವೇಳೆ ಘಟಕದಪರವಾನಗಿ ಅವಧಿಯು 2022 ನೇ ಸಾಲಿನ ಮಾ.31ಕ್ಕೆ ಅವಧಿಮುಗಿದಿದ್ದರೂ ನವೀಕರಣಗೊಳಿಸಿರಲಿಲ್ಲ.ಅನಧಿಕೃತವಾಗಿ ನೀರು ಪೂರೈಸಲಾಗುತ್ತಿತ್ತು. ಇದಕ್ಕೆ ಕೂಡಲೇಘಟಕ ಹಾಗೂಗ್ರಾಮದಲ್ಲಿ ನೀರುಸಂಗ್ರಹಿಸಿದ್ದ ಟ್ಯಾಂಕ್ಗಳನ್ನುಸೀಜ್ ಮಾಡಲಾಗಿದ್ದುನೀರು ಪೂರೈಸದಂತೆಸೂಚಿಸಲಾಗಿದೆ. ಹಾಗೆಯೇ ಘಟಕದ ಮಾಲೀಕರವಿರುದ್ಧ ಪೊಲೀಸ್ಠಾಣೆಯಲ್ಲಿ ದೂರುದಾಖಲಿಸಲಾಗಿದೆ.