ಕಾಂಗ್ರೆಸ್‌ ಸಭೆಯಲ್ಲಿ ಗಲಾಟೆ 
ಚಿಕ್ಕಬಳ್ಳಾಪುರ

ಕಾಂಗ್ರೆಸ್‌ ಸಭೆಯಲ್ಲಿ ಗಲಾಟೆ, ಕೈ ಕೈ ಮಿಲಾಯಿಸಿದ ನಾಯಕರ ಬೆಂಬಲಿಗರು

ಚಿಕ್ಕಬಳ್ಳಾಪುರ: ಜಿಲ್ಲಾಕಾಂಗ್ರೆಸ್‌ ಕೈಗೊಂಡಿದ್ದ ಸಂಘಟನ್‌ ಸೃಜನ್‌ ಅಭಿಯಾನದ ಕಾರ್ಯಕ್ರಮದಲ್ಲಿ ಪರಸ್ಪರ ನಾಯಕರಬೆಂಬಲಿಗರ ಕೈ ಕೈ ಮಿಲಾಯಿಸಿದ್ದು ಗಲಾಟೆ ಬಿಡಿಸಲು ಹರಸಾಹಸ ಮಾಡಬೇಕಾಯಿತು.

ಮಾಜಿ ಸಚಿವ ಡಾ ಎಂ.ಸಿ.ಸುಧಾಕರ್‌ ಹಾಗೂ ಶಿಡ್ಲಘಟ್ಟ ಮುಖಂಡರಾಜೀವ್‌ ಗೌಡ ಬೆಂಬಲಿಗರು ಪಕ್ಷದ ರಾಜಕೀಯ ಬೆಳವಣಿಗೆಗಳ ವಿಚಾರವಾಗಿ ಮೊದಲ ಮಾತಿನ ಚಕಮಕಿನಡೆದಿದೆ. ಹಿರಿಯ ನಾಯಕರು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಇದೇ ವೇಳೆ ಅವಾಚ್ಯ ಶಬ್ದಗಳಿಂದನಿಂದನೆ, ಬೆದರಿಕೆ, ತಳ್ಳಾಟ, ಕೈ ಕೈ ಮಿಲಾಯಿಸುವುದರೊಂದಿಗೆ ಗೊಂದಲ ಉಂಟಾಯಿತು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆಗಳವಿಚಾರವಾಗಿಯೇ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿದೆ. ಸ್ವಪಕ್ಷೀಯ ನಾಯಕರಾದ ಪುಟ್ಟು ಆಂಜಿನಪ್ಪಹಾಗೂ ರಾಜೀವ್‌ ಗೌಡ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ, ಪಕ್ಷದ ಬೆಂಬಲ ವಿಚಾರವಾಗಿ ಪರಸ್ಪರವಿರುದ್ಧದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನು ಮಾಜಿ ಸಚಿವ ಡಾ ಎಂ.ಸಿ.ಸುಧಾಕರ್‌ಪರೋಕ್ಷವಾಗಿ ಪುಟ್ಟು ಆಂಜಿನಪ್ಪಗೆ ಬೆಂಬಲವಾಗಿ ನಿಂತಿದ್ದಾರೆ. ಇದನ್ನು ಪ್ರಸ್ತಾಪಿಸುವನೆಪದಲ್ಲಿ ರಾಜೀವ್‌ ಗೌಡರ ಬೆಂಬಲಿಗರು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಟ್ಟುಆಂಜಿನಪ್ಪರನ್ನು ಜತೆಯಲ್ಲಿ ಕುಳ್ಳಿರಿಸಿಕೊಂಡಿದ್ದ ಮಾಜಿಸಚಿವ ಡಾ ಎಂ.ಸಿ.ಸುಧಾಕರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜೀವ್‌ ಗೌಡ ಬೆಂಬಲಿಗರುಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪೊಲೀಸರು ರಕ್ಷಣೆಯನಡುವೆ ಮಾಜಿ ಸಚಿವರನ್ನು ಗುಂಪಿನಿಂದ ಹೊರಗೆ ಕರೆದುಕೊಂಡು ಬರಲಾಯಿತು. ಇದಕ್ಕೆಅಡ್ಡಿಪಡಿಸುತ್ತಿದ್ದ ಕಾರ್ಯಕರ್ತರು ಸವಾಲೆಸೆದು ತೊಡೆ ತಟ್ಟಿದ್ದರು. ಇದರಿಂದ ಗೊಂದಲದ ವಾತಾವರಣನಿರ್ಮಾಣವಾಯಿತು.