ಚಿಕ್ಕಬಳ್ಳಾಪುರ:ಶಿಡ್ಲಘಟ್ಟ ನಗರದಲ್ಲಿ ತುಂತುರು ಮಳೆಯ ಹನಿಗಳು ಬೀಳುತ್ತಿರುವುದರ ನಡುವೆ ಸಿಡಿಲು ಬಡಿದು ತೆಂಗಿನಮರ ಧಗ ಧಗನೆ ಹೊತ್ತಿ ಉರಿದಿದೆ.
ಇಲ್ಲಿನಷರಾಫ್ ಬೀದಿಯ ಡಿಪೋ ಗೋಪಿ ಎಂಬುವವರ ಮನೆ ಬಳಿಯ ಬಯಲಿಲ್ಲನ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರಕ್ಕೆಬೆಂಕಿ ಹೊತ್ತಿಕೊಂಡು ಧಗ ಧಗನೆ ಉರಿಯತೊಡಗಿತು. ಸುತ್ತ ಮುತ್ತಲ ವಾಸಿಗಳು ಆತಂಕಕ್ಕೆ ಬಿದ್ದು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ತೆಂಗಿನ ಮರಕ್ಕೆ ಬಿದ್ದಿದ್ದ ಬೆಂಕಿಯನ್ನು ನಂದಿಸಿದ್ದಾರೆ.