ಚಿಂತಾಮಣಿಯ ಗಾಂಧಿನಗರ road workಬಡಾವಣೆಯಲ್ಲಿ ರಸ್ತೆಗೆ ಹಾಕಿದ ಕಳಪೆ ಮಣ್ಣುನ್ನು ಜೆಸಿಬಿ ಮೂಲಕ ತೆರವು ಮಾಡಿದರು.  
ಚಿಕ್ಕಬಳ್ಳಾಪುರ

ರಸ್ತೆ ಕಾಮಗಾರಿಗೆ ಬಳಸಿದ ಕಳಪೆ ಮಣ್ಣು ತೆರವು road work

ಚಿಂತಾಮಣಿ :ಅಮೃತ್​ ನಗರೋತ್ಥಾನ&4 ಯೋಜನೆಯಡಿ ಚಿಂತಾಮಣಿಯ ಗಾಂಧಿನಗರದಲ್ಲಿ 2.74 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬೃಹತ್​ ರಸ್ತೆ ಕಾಮಗಾರಿಗೆ ಹಾಕಿದ ಕಳಪೆ ಮಣ್ಣು ತೆರವುಗೊಳಿಸಿದ್ದಾರೆ.
ರಸ್ತೆ ಕಾಮಗಾರಿಗೆ ಕಳಪೆ ಮಣ್ಣು ಹಾಕುತ್ತಿರುವ ಬಗ್ಗೆ ಸ್ಥಳಿಯ ನಿವಾಸಿಗಳು ಹಾಗೂ ವಿಜಯವಾಣಿ ಸ್ಥಳಕ್ಕೆ ತೆರಳಿ ಕಾಮಗಾರಿಯ ನೈಜ ಪರಿಸ್ಥಿತಿಯ ಪೋಟೋ ಸಮೇತ ಶಾಸಕ ಡಾ.ಎಂ.ಸಿ.ಸುಧಾಕರ್​ ಗಮನಕ್ಕೆ ತಂದಿದ್ದಾರೆ.
ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಗುತ್ತಿಗೆದಾರ ಕಾಮಗಾರಿಗೆ ಬಳಸಿದ ಕಳಪೆ ಮಣ್ಣನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
ನಗರದ ಗಾಂಧಿನಗರದ ಸೀನಪ್ಪ ಮನೆಯಿಂದ ಐಪಾಳ್ಯದ ಮಾಜಿ ಕೌನ್ಸಿಲರ್​ ಮಂಜು ಮನೆ ಮಾರ್ಗವಾಗಿ ಟವರ್​ ವೆಂಕಟೇಶ್​ ಮನೆಯವರೆಗೆ ಹೊಸ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಾಮಗಾರಿ ಪ್ರಾರಂಭಿಸಲಾಗಿತ್ತು. road work
ಗುತ್ತಿಗೆದಾರ ಕಾಮಗಾರಿ ವೇಳೆ ರಸ್ತೆಗೆ ಕಲುಷಿತ ಮಣ್ಣು ಹಾಕಿದ್ದರು. ಈ ಮಣ್ಣು ಹಾಕದಂತೆ ನಿವಾಸಿಗಳು ಗುತ್ತಿಗೆದಾರರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ.
ನಂತರ ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಶಾಸಕರು ತರಾಟೆಗೆ ತೆಗೆದುಕೊಂಡ ಬಳಿಕ ಇಡೀ ರಸ್ತೆಗೆ ಹಾಕಿದ ಮಣ್ಣನ್ನು ಗುತ್ತಿಗೆದಾರ ಜೆಸಿಬಿಯಲ್ಲಿ ತೆಗೆದು ಬೇರೆ ಕಡೆ ಸಾಗಿಸುವ ಮೂಲಕ ಕಳಪೆ ಮಣ್ಣು ಹಾಕುವುದಕ್ಕೆ ಬ್ರೇಕ್​ ಹಾಕಿದ್ದಾರೆ.
23.ಸಿ.ಎಂ.ವೈ.1 ಮತ್ತು 2