ಚಿಕ್ಕಬಳ್ಳಾಪುರದ ಚರ್ಚಿನಲ್ಲಿ ಕ್ರಿಸ್ಮಸ್ ಸಂಭ್ರಮದ ದೃಶ್ಯ 
ಚಿಕ್ಕಬಳ್ಳಾಪುರ

ಎಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ, ಖುಷಿಯಲ್ಲಿ ಮಿಂದೆದ್ದ ಜನ

ಚಿಕ್ಕಬಳ್ಳಾಪುರ: ಸಾಮೂಹಿಕ ಪ್ರಾರ್ಥನೆ, ಭೋಜನ ಅತಿಥ್ಯ ಸೇರಿದಂತೆ ವಿವಿಧ ಚಟುವಟಿಕೆಯೊಂದಿಗೆ ಕ್ರಿಸ್ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಚಿಕ್ಕಬಳ್ಳಾಪುರ ನಗರದ ಸಿಎಸ್‌ ಐ ಚರ್ಚ್‌, ಸೆಂಥ್‌ ಕ್ಷೇವಿಯರ್‌ ಚರ್ಚು ಸೇರಿದಂತೆ ವಿವಿಧ ಚರ್ಚುಗಳಲ್ಲಿ ವಿಶೇಷ ದಿನದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿಯಿಂದಲೇ ಫಾದರ್‌ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಪೂಜಾ ಕಾರ್ಯಕ್ರಮಗಳು ನೆರವೇರಿದವು. ಇದರ ನಡುವೆ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಕುರಿದೊಡ್ಡಿಯಲ್ಲಿ ಬಾಲ ಯೇಸುವಿನ ಜನನ, ಕರ್ತನ ಸಂದೇಶಗಳನ್ನು ಆಲಿಸುತ್ತಿರುವ ಭಕ್ತ ಸಮೂಹ, ಯೇಸು ಕ್ರಿಸ್ತನನ್ನು ಶಿಲುಬೇರಿಸುತ್ತಿರುವುದು ಸೇರಿದಂತೆ ನಾನಾ ಸನ್ನಿವೇಶದ ಸಂದೇಶವನ್ನು ಸಾರುವ ಕಲಾಕೃತಿಗಳನ್ನು ವೀಕ್ಷಿಸಿದರು. ಚರ್ಚುಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇನ್ನೂ ಅನ್ಯ ಧರ್ಮದವರು ಸಹ ಕುಟುಂಬ ಸದಸ್ಯರೊಂದಿಗೆ ಬಂದು ದೇವರ ಮುಂಭಾಗ ಮೊಂಬತ್ತಿಗಳನ್ನು ಹೊತ್ತಿಸಿ, ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
ಸಂಸದ ಡಾ ಕೆ.ಸುಧಾಕರ್‌ ಚರ್ಚುಗಳಿಗೆ ಭೇಟಿ ನೀಡಿ, ಕ್ರೈಸ್ತ ಬಾಂಧವರಿಗೆ ಶುಭಾಶಯ ಕೋರಿದರು.