ಗುಡಿಬಂಡೆ ತಾಲೂಕಿನ ಜೆ.ಪಿ.ನಗರದ ಆದರ್ಶ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚೆಸ್, ಕೇರಂ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಪಂ ಉಪ ಕಾರ್ಯದರ್ಶಿ ಅತಿಕ್ ಪಾಷಾ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ, ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಲಮ್ಮ ಇದ್ದರು.
- ಕ್ರೀಡಾಕೂಟ, ಬಾಲ್ಯ ವಿವಾಹದ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಮತ
- ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಆಟಗಳೂ ಅಗತ್ಯ.
- 14 ವರ್ಷದೊಳಗಿನ ಮಕ್ಕಳ ಚೆಸ್, ಕೇರಂ ಕ್ರೀಡಾಕೂಟ, ಬಾಲ್ಯ ವಿವಾಹದ ಜಾಗೃತಿ
ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಓದು, ದೈಹಿಕ ಕ್ರೀಡೆಗಳಷ್ಟೇ ಸಾಲದು, ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಆಟಗಳೂ ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆಸ್, ಕೇರಂನಂತಹ ಏಕಾಗ್ರತೆ, ಬುದ್ಧಿಶಕ್ತಿ ಹೆಚ್ಚಿಸುವ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಮಿದುಳಿನ ಶಕ್ತಿ ಚುರುಕುಗೊಳಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಜೆ.ಪಿ.ನಗರದ ಆದರ್ಶ ವಿದ್ಯಾಲಯದಲ್ಲಿ ತಾಪಂ, ತಿರುಮಣಿ ಗ್ರಾಪಂ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಚೆಸ್, ಕೇರಂ ಕ್ರೀಡಾಕೂಟ, ಬಾಲ್ಯ ವಿವಾಹದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಖೋಖೊ, ವಾಲಿಬಾಲ್, ಕಬ್ಬಡಿ, ರನ್ನಿಂಗ್ ಸೇರಿ ದೈಹಿಕ ಕ್ರೀಡೆಗಳಲ್ಲಿ ಮಾತ್ರ ಆಸಕ್ತಿರಾಗಿರುತ್ತಾರೆ. ಬುದ್ಧಿ ಶಕ್ತಿ ಹೆಚ್ಚಿಸುವ ಚೆಸ್, ಕೇರಂ ನಂತಹ ಆಟಗಳಲ್ಲಿ ಭಾಗವಹಿಸುವುದಿಲ್ಲ. ಶಿಕ್ಷಕರು ಮಕ್ಕಳಿಗೆ ಈ ಕ್ರೀಡೆ ಕಲಿಸಬೇಕು. ಇತ್ತೀಚೆಗೆ ಈ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹ ಪ್ರಕರಣ ನಡೆಯುತ್ತಿರುವುದು ವಿಷಾದನೀಯ. ಬಾಲ್ಯ ವಿವಾಹಗಳಿಂದ ಅನೇಕ ದುಷ್ಪರಿಣಾಮ ಉದ್ಬವಿಸಲಿದೆ. ಸಾಧನೆ ಮಾಡಬೇಕೆಂಬ ಕನಸು ಹೊತ್ತ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಪೊಲೀಸ್ ಠಾಣೆಗಳಲ್ಲಿ ಹೆಚ್ಚು ೋಕ್ಸೋ ಪ್ರಕರಣಗಳೇ ದಾಖಲಾಗುತ್ತಿವೆ. ಇದೆಲ್ಲದಕ್ಕೂ ಶಿಕ್ಷಣ ಒಂದೇ ಮೂಲ ಮಂತ್ರ. ಶಿಕ್ಷಣದಿಂದ ಮಾತ್ರ ಎಲ್ಲವನ್ನೂ ಹೋಗಲಾಡಿಸಬಹುದು ಎಂದರು.
ತಾಪಂ ಇಒ ನಾಗಮಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಬುದ್ಧಿ ಶಕ್ತಿ ಹೆಚ್ಚಿಸಲು ಚೆಸ್, ಕೇರಂನಂತಹ ಆಟಗಳು ಸಹಕಾರಿ. ಈ ಕ್ರೀಡೆಗಳ ಕುರಿತು ಹೆಚ್ಚು ಪ್ರಚಾರ ಮಾಡಬೇಕಿದೆ. ಸೋಲು&ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ಬಾಲ್ಯ ವಿವಾಹದ ಕುರಿತು ಜಾಗೃತರಾಗಬೇಕು. ಬಾಲ್ಯವಿವಾಹಕ್ಕೆ ಪಾಲಕರು ಮುಂದಾದರೇ ತಿಳಿಹೇಳಬೇಕು ಎಂದರು.
ಚೆಸ್, ಕೇರಂ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತಿರುಮಣಿ ಪಿಡಿಒ ಶ್ರೀನಿವಾಸಮೂರ್ತಿ, ಸೋಮೇನಹಳ್ಳಿ ಪಿಡಿಒ ನರಸಿಂಹಮೂರ್ತಿ, ದಪ್ಪರ್ತಿ ಪಿಡಿಒ ರಾಮಾಂಜಿ, ಬಿಇಒ ಕೃಷ್ಣಕುಮಾರಿ, ಆದರ್ಶ ಶಾಲೆ ಮುಖ್ಯಶಿಕ್ಷಕಿ ಕೃಷ್ಣಕುಮಾರಿ, ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಕಾರ್ಯದರ್ಶಿ ಬಿ.ಆರ್.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ರಾಜಶೇಖರ್, ಲಕ್ಷಿ$್ಮನರಸಿಂಹಗೌಡ, ರಫೀಕ್ ಇದ್ದರು.