ಸರಕಳವು ಆರೋಪಿ ಕೆ.ಎನ್​.ಚಂದ್ರನನ್ನು ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿರುವುದು. 
ಚಿಕ್ಕಬಳ್ಳಾಪುರ

ಚಿಂತಾಮಣಿಯಲ್ಲಿ ಸರಗಳ್ಳನ ಬಂಧನ

ಪ್ರಮುಖ ಮುಖ್ಯಾಂಶಗಳು

  • ಚಿಂತಾಮಣಿಯಲ್ಲಿ ಸರಗಳ್ಳನ ಬಂಧನ
ಚಿಂತಾಮಣಿ: ಚಿಂತಾಮಣಿ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯ ಕುರುಬೂರು, ನಾಯಿಂದ್ರಹಳ್ಳಿ, ಕೆಂಚಾರ್ಲಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ನಡಂಪಲ್ಲಿಯ ಮೂರು ಪ್ರಕರಣಗಳಲ್ಲಿ ಸರಗಳವು ಮಾಡಿದ್ದ ಆರೋಪಿಯನ್ನು ಚಿಂತಾಮಣಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕದಿರಾಪುರದ ನಿವಾಸಿ ಕೆ.ಎನ್​.ಚಂದ್ರ(26) ಬಂಧಿತ. ಆರೋಪಿಯಿಂದ 39.760 ಗ್ರಾಂ ಬಂಗಾರದ ಒಡವೆ ಮತ್ತು
ಎರಡು ಬೈಕ್​ ವಶಕ್ಕೆ ಪಡೆಯಲಾಗಿದೆ.
ಆರೋಪಿ ಜ.2ರಂದು ನಡಂಪಲ್ಲಿಯ ಸರಸ್ವತಮ್ಮ(50) ಅವರನ್ನು ಬೆದರಿಸಿ ಓಲೆ, ಚಿನ್ನದ ಸರ, ಏ.1ರಂದು ಕುರುಬೂರು ಕೆರೆಯ ಬಳಿ ಕುರಿ ಮೇಯಿಸುತ್ತಿದ್ದ ಪದ್ಮಾ(48)ಗೆ ಚಾಕು ತೋರಿಸಿ ಚಿನ್ನದ ಓಲೆ, ತಾಳಿ ಬೊಟ್ಟು ಸೇರಿ 15.20 ಗ್ರಾಂ ಚಿನ್ನಾಭರಣ, ಏ.3ರಂದು ನಾಯಿಂದ್ರಹಳ್ಳಿಯ ಲಕ್ಷಿ$್ಮನಾರಾಯಣಮ್ಮ(70)ಗೆ ತೋಟದ ಬಳಿ ಚಾಕು ತೋರಿಸಿ ಕರಿಮಣಿಗಳಲ್ಲಿನ 8 ಗ್ರಾಂ ಚಿನ್ನದ ಗುಂಡುಗಳ ಸರ ಕಿತ್ತುಕೊಂಡು ಪರಾರಿಯಾಗಿದ್ದ.
ಚಿಕ್ಕಬಳ್ಳಾಪುರ ಎಸ್​ಪಿ ಕುಶಲ್​ ಚೌಕ್ಸೆ, ಅಡಿಷನಲ್​ ಎಸ್ಪಿ ಜಗನ್ನಾಥ ರೈ ಕಳ್ಳತನ ನಡೆದ ಸ್ಥಳಗಳಿಗೆ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ತಾಕೀತು ಮಾಡಿದ್ದರು. ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿ ಮುರಳೀಧರ್​ ಮಾರ್ಗದರ್ಶನದಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ಶಿವರಾಜ್​ ಮತ್ತು ತಂಡ ಆರೋಪಿಯನ್ನು ಪತ್ತೆ ಹಚ್ಚಿದೆ.
ಖಿನ್ನತೆಗೆ ಮಹಿಳೆ ಆತ್ಮಹತ್ಯೆ : ಚಿಕ್ಕಬಳ್ಳಾಪುರ: ಅನಾರೋಗ್ಯ ಸೇರಿ ನಾನಾ ಸಮಸ್ಯೆಗಳ ಹಿನ್ನೆಲೆಯಲ್ಲಿ ತಮಿಳುನಾಡಿನ ಮೂಲದ ಗೃಹಿಣಿಯೊಬ್ಬರು ನಗರದ ಸರ್​ ಎಂ.ವಿ.ಬಡಾವಣೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ಎಪಿಎಂಸಿ ಈರುಳ್ಳಿ ವ್ಯಾಪಾರಿ ಕನಕವೇಲು ಪತ್ನಿ ವಿಜಯಮ್ಮ (50) ಮೃತೆ. ಅನಾರೋಗ್ಯ ಸಮಸ್ಯೆ, ಮಗನಿಗೆ ಮದುವೆಯಾಗದಿರುವುದು ಸೇರಿ ಹಲವು ಸಮಸ್ಯೆಗಳಿಂದ ಖಿನ್ನತೆಗೊಳಗಾಗಿದ್ದರು. ಹೀಗಾಗಿ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕಿತ್ಸೆ ಫಲಿಸದೆ ಗಾಯಾಳು ಸಾವು: ಚಿಂತಾಮಣಿ: ಚಿಂತಾಮಣಿ-&ಬೆಂಗಳೂರು ರಸ್ತೆಯ ವೈಜಕೂರು ಗೇಟ್​ ಬಳಿ ಅಪರಚಿತ ವಾಹನ ಬೈಕ್​ಗೆ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಗಂಭಿರವಾಗಿ ಗಾಯಗೊಂಡಿದ್ದವರ ಪೈಕಿ ತಾಲೂಕಿನ ಕೈವಾರ ಹೋಬಳಿ ಬನಹಳ್ಳಿ ಗ್ರಾಮದ ಅನಿಲ್​ ಕುಮಾರ್​(37) ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.7ರಂದು
ಮೃತಪಟ್ಟಿದ್ದಾರೆ. ಮೃತನ ತಾಯಿ ಪಾರ್ವತಮ್ಮ ನೀಡಿದ ದೂರಿನ ಮೇಲೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಳೇ ವೈಷಮ್ಯಕ್ಕೆ ಯುವಕನ ಮೇಲೆ ಹಲ್ಲೆ: ಚಿಂತಾಮಣಿ: ಸ್ನೇಹಿತರ ಜತೆ ಕುಳಿತಿದ್ದಾಗ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮೂವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಚೆನ್ನಕೇಶವಪುರ ಗಂಗಾಧರಪ್ಪ(30) ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.ಏ.7ರಂದು ರಾತ್ರಿ ಗ್ರಾಮದ ಶಿವಾನಂದ, ಶಿವಮಣಿ, ಶಶಿಕುಮಾರ್​ ಜಗಳ ತೆಗೆದು ಅವಾಚ್ಯವಾಗಿ ನಿಂದಿಸಿದಲ್ಲದೆ ದೊಣ್ಣೆಯಿಂದ ತಲೆಗೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಗಂಗಾಧರಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳು ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.