ಕಾರು ಪಲ್ಟಿಯಾಗಿ ದಾರುಣ ಸಾವು
- ಚಾಕು ತೋರಿಸಿ ಮೊಬೈಲ್ ದೋಚಿದ್ದ ಕದೀಮರು
- ತಪ್ಪಿಸಿಕೊಳ್ಳುವ ಧಾವಂತದಲ್ಲಿ ಅವಡ
- ಒಬ್ಬನ ಸೆರೆ
ಶಿಡ್ಲಟ್ಟ: ಚಾಕು ತೋರಿಸಿ ಕಾರ್ಮಿಕರ ಬಳಿ ಮೊಬೈಲ್ ದೋಚಿದ ಕದೀಮರು ಪರಾರಿಯಾಗುವ ಧಾವಂತದಲ್ಲಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು, ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತ@ ಆಂಧ್ರದ ಚಿತ್ತೂರಿನ ಸಿದ್ದು (25)ಮೃತ. ಲಾರಿ ಡ್ರೆವರ್ ಆಗಿದ್ದ ಈತ 3 ವರ್ಷದಿಂದ ಪತ್ನಿ ಜತೆ ಕೈವಾರದಲ್ಲಿ ನೆಲೆಸಿದ್ದ. ಲಾರಿ ಡ್ರೆವರ್ ಮೂಲತ@ ಕನ್ನಮಂಗಲ ನಿವಾಸಿ, ಕೈವಾರದಲ್ಲಿ ನೆಲೆಸಿದ್ದ ವೈಶಾಖ್ ಬಂಧಿತ.
ಆಗಿದ್ದೇನು?: ತಾಲೂಕಿನ ಎಚ್.ಕ್ರಾಸ್ ಮಾರ್ಗದ ಹಾರಡಿ ಬಳಿ ಟೈಲ್ಸ್ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಉತ್ತರ ಪ್ರದೇಶದ ನಾಲ್ವರು ಸ್ವಂತ ಊರಿಗೆ ತೆರಳಲು ಬಸ್ಗಾಗಿ ಎಚ್.ಕ್ರಾಸ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ನಾಲ್ವರ ಪೈಕಿ ಮೂವರ ಬಳಿ ಮೊಬೈಲ್ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.
ರಾತ್ರಿ ಗಸ್ತು ಮುಗಿಸಿ ಠಾಣೆಗೆ ವಾಪಸ್ ಆಗುತ್ತಿದ್ದ ಶಿಡ್ಲಟ್ಟ ಗ್ರಾಮಾಂತರ ಠಾಣೆಯ ಎಸ್ಐ ಜೀಪನ್ನು ನಿಲ್ಲಿಸಿದರಿಂದ ಕೂಲಿ ಕಾರ್ಮಿಕರು ನಡೆದ ಟನೆ ವಿವರಿಸಿದ್ದಾರೆ. ಕಾರ್ಮಿಕರ ಮೊಬೈಲ್ಗಳು ಕಳ್ಳರ ಬಳಿ ಇದ್ದ ಕಾರಣ ಮೊಬೈಲ್ ಟವರ್ ಲೊಕೇಷನ್ನ್ನು ತಿಳಿದುಕೊಂಡು ಪೊಲೀಸರು ಕಾರನ್ನು ಹಿಂಬಾಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಕಳ್ಳರ ಕಾರು ಶಿಡ್ಲಟ್ಟ&ಜಂಗಮಕೋಟೆ ಮಾರ್ಗದ ಬೋದಗೂರು ಮಳಮಾಚನಹಳ್ಳಿ ಮಧ್ಯೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಇಬ್ಬರೂ ಕುಡಿತದ ದಾಸರಾಗಿದ್ದು ಮೊಬೈಲ್ ದರೋಡೆ ಸಮಯದಲ್ಲೂ ವಿಪರೀತ ಮಧ್ಯೆ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಶಿಡ್ಲಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್ಪಿ ಕುಶಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.