ಸಾಂದರ್ಭಿಕ ಚಿತ್ರ 
ಚಿಕ್ಕಬಳ್ಳಾಪುರ

ಹಿತ್ತಾಳೆ, ತಾಮ್ರದ ಗುಜರಿ ವಸ್ತುಗಳು ಕಳವು

ಚಿಂತಾಮಣಿ: ನಗರದಲ್ಲಿ ಗೋದಾಮಿನ ಬೀಗ ಮುರಿದು ಒಳನುಗ್ಗಿದ ಖದೀಮರು ಸಿಗರೇಟ್​ ಪ್ಯಾಕ್​ಗಳು, ನಗದು ಹಾಗೂ ಗುಜರಿ ಸಾಮಗ್ರಿಗಳನ್ನು ಕದ್ದಿದ್ದಾರೆ.

ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳರು ಆಟೋದಲ್ಲಿ ಬಂದು ಕಳವು ಮಾಡಿರುವುದು ಕಂಡು ಬಂದಿದೆ.

20 ದಿನಗಳಿಂದ ಅಂಗಡಿ ಪಕ್ಕದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಹಳೇ ಹಿತ್ತಾಳೆ ಹಾಗೂ ತಾಮ್ರದ ಸಾಮಾನುಗಳು ಕಳುವಾಗಿವೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.