ಪಾಲೇಪಲ್ಲಿ ಅಶೋಕ್ (24) ಮೃತ
- ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ
- ಕಾರು, ಬೈಕ್ ಮಧ್ಯೆ ಅಪಘಾತ
- ಪಾಲೇಪಲ್ಲಿ ಅಶೋಕ್ (24) ಮೃತ
ಚಿಂತಾಮಣಿ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ. ನಗರದ ಬಾಗೇಪಲ್ಲಿ ರಸ್ತೆಯ ಧನಮಿಟ್ಟೇನಹಳ್ಳಿ ದಿನ್ನೆಯ ಬಳಿ ಗುರುವಾರ ಬೆಳಗ್ಗೆ ಕಾರು, ಬೈಕ್ ಮಧ್ಯೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ನಲ್ಲಿ ಇದ್ದ ಇಬ್ಬರು ಸವಾರರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಪಾಲೇಪಲ್ಲಿ ಅಶೋಕ್ (24) ಮೃತ. ಪಾಲೇಪಲ್ಲಿ ಹರೀಶ್ ಗಾಯಗೊಂಡವ, ಕಾರಿನಲ್ಲಿದ್ದ ದಂಪತಿ, ಮಗು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಬೈಕ್ನ ಮುಂಭಾಗ ಜಖಂ ಆಗಿದೆ, ಕಾರು ರಸ್ತೆಯ ಪಕ್ಕದ ಗುಂಡಿಗೆ ಇಳಿದಿದೆ. ಅಶೋಕ್, ಹರೀಶ್ರನ್ನು ನಿಮ್ಹಾನ್ಸ್ಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹರೀಶ್ನನ್ನು ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತನ ಕುಟುಂಬಸ್ಥರ ದೂರಿನ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.