- ಹೆದ್ದಾರಿಯ ಚಿಂತಾಮಣಿ-&ಶಿಡ್ಲಘಟ್ಟ ರಸ್ತೆಯ ವೈ ಹುಣಸೇನಹಳ್ಳಿ ಬಳಿ ಅಪಘಾತ
- ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಮಾಡಿಕೆರೆಯ ಗಿರೀಶ್ (24)ಮೃತ.
- ತೀವ್ರ ಗಾಯಗೊಂಡಿ ಬೈಕ್ ಸವಾರ
ಚಿಂತಾಮಣಿ: ಹೆದ್ದಾರಿಯ ಚಿಂತಾಮಣಿ-&ಶಿಡ್ಲಘಟ್ಟ ರಸ್ತೆಯ ವೈ ಹುಣಸೇನಹಳ್ಳಿ ಬಳಿಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಮುಂದೆ ಹೋಗುತ್ತಿದ್ದ ಅಪರಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ತೀವ್ರ ಗಾಯಗೊಂಡಿ ಬೈಕ್ ಸವಾರ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ. ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಮಾಡಿಕೆರೆಯ ಗಿರೀಶ್ (24)ಮೃತ. ತಂದೆ ನಾರಾಯಣಸ್ವಾಮಿ ದೂರಿನ ಮೇಲೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ರಾತ್ರಿ ಮುಂದೆ ಹೋಗುತ್ತಿದ್ದ ವಾಹನ ಯಾವುದೇ ಮುನ್ಸೂಚನೆ ನೀಡದೆ ತಕ್ಷಣ ಬ್ರೇಕ್ ಹಾಕಿದ್ದರಿಂದ ಗಿರೀಶ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವಾಗ ದಾರಿಯ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ.ಬುಧವಾರ ಮೃತನ ಅಂತ್ಯ ಸಂಸ್ಕಾರ ನೆರವೇರಿದೆ.