ಬಂಧನಕ್ಕೊಳಗಾದ ಪೊಲೀಸರು  
ಚಿಕ್ಕಬಳ್ಳಾಪುರ

ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪೊಲೀಸ್‌ ಅಧಿಕಾರಿಗಳ ಜಾಮೀನು ರದ್ದು

ಚಿಕ್ಕಬಳ್ಳಾಪುರ: ಜಮೀನಿನ ಗಲಾಟೆ ಪ್ರಕರಣದಲ್ಲಿಬಿ ರಿಪೋರ್ಟ್‌ ಹಾಕಲು ಲಂಚ ಪಡೆಯುತ್ತಿದ್ದ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕಶರಣಪ್ಪ  ಹಾಗೂ ಸಹಾಯಕ ನಿರೀಕ್ಷಕ ವೆಂಕಟೇಶಪ್ಪಗೆ ಸಿಕ್ಕಿದ್ದ ಜಾಮೀನನ್ನು ನ್ಯಾಯಾಲಯರದ್ದುಗೊಳಿಸಿದೆ.

ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣಕ್ಕೆಸಂಬಂಧಿಸಿದಂತೆ ವಾದ ಪ್ರತಿವಾದ ನಡೆಯಿತು. ಇದೇ ವೇಳೆ ಪ್ರಭಾವಿ ಅಧಿಕಾರಿಗಳು, ಸಾಕ್ಷ್ಯ ನಾಶ,ಗಂಭೀರತೆ ಸೇರಿದಂತೆ ನಾನಾ ಅಂಶಗಳನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ರದ್ದುಪಡಿಸಿದರು.ಕೂಡಲೇ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಲು ಸೂಚಿಸಲು ವಕೀಲರಿಗೆ ಆದೇಶಿಸಿಸಲಾಯಿತು.

ಚಿಕ್ಕಬಳ್ಳಾಪುರ ತಾಲೂಕಿನ ಮೋಟ್ಲೂರಿನಲ್ಲಿಜಮೀನಿನ ವಿಚಾರದ ಗಲಾಟೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.ಇದಕ್ಕೆ ಚಾರ್ಜ್‌ ಶೀಟ್‌ ಸಲ್ಲಿಕೆ ವೇಳೆ ಬಿ ರಿಪೋರ್ಟ್‌ ಹಾಕಲು ದೂರುದಾರ ರಘುವಿಗೆ ಪೊಲೀಸರುಲಂಚಕ್ಕೆ ಪೀಡಿಸಿದ್ದರು. ೧ ಲಕ್ಷ ರೂ ಪೈಕಿ ೭೦ ಸಾವಿರ ರೂಗಳನ್ನು ಪಡೆಯುತ್ತಿದ್ದ ಸಂದರ್ಭದಲ್ಲಿದಾಳಿ ನಡೆಸಿದ ಲೋಕಾಯುಕ್ತರು ಹಣ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರ ನಡುವೆನ್ಯಾಯಾಧೀಶರು ಎದುರು ಹಾಜರುಪಡಿಸಿದ ತಕ್ಷಣವೇ ಇಬ್ಬರಿಗೂ ತಕ್ಷಣ ಜಾಮೀನು ಸಿಕ್ಕಿದ್ದು ೨೪ ತಾಸುಕಳೆಯುವುದರೊಳಗೆ ಹೊರಗೆ ಬಂದಿದ್ದರು. ಇದನ್ನು ವಿರೋಧಿಸಿ ವಕೀಲರು ನ್ಯಾಯಾಲಯ ಕಲಾಪದಿಂದದೂರ ಉಳಿದು ಪ್ರತಿಭಟಿಸಿದ್ದು ಇದರ ನಡುವೆ ಜಾಮೀನು ವಿಚಾರವಾಗಿ ಸೋಮವಾರ ವಿಚಾರಣೆ ನಡೆದಿದ್ದುವಾದ ಪ್ರತಿವಾದವನ್ನು ಆಲಿಸಿ, ಜಾಮೀನು ರದ್ದುಪಡಿಸಲಾಗಿದೆ. ಇದರ ಆದೇಶ ಹೊರ ಬರುತ್ತಿದ್ದಂತೆಆರೋಪಿಗಳು ಹೈಕೋರ್ಟಿನ ಮೊರೆ ಹೋಗಿದ್ದಾರೆ. ಪ್ರಸ್ತುತ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಲಭ್ಯವಾಗಿದೆ.