- ಒಂದೇ ಕುಟುಂಬದ 8 ಜನರು ಆಸ್ಪತ್ರೆ ಪಾಲಾಗಿದ್ದ ಪ್ರಕರಣ
- ವಾಸನೆ ಬಾರದ ವಿಷದ ಮಾತ್ರೆ ನೀಡಿದ್ದ
- ವೆಂಕಟರವಣಪ್ಪ (62) ಆರೋಪಿ.
ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ತಾಲೂಕಿನ ದೇವಿರೆಡ್ಡಿಪಲ್ಲಿಯಲ್ಲಿ ವಿಷ ಮಿಶ್ರಿತ ಊಟ ಸವಿಸಿ ಒಂದೇ ಕುಟುಂಬದ 8 ಜನರು ಆಸ್ಪತ್ರೆ ಪಾಲಾಗಿದ್ದ ಪ್ರಕರಣ ಸಂಬಂಧ ವಾಸನೆ ಬಾರದ ವಿಷದ ಮಾತ್ರೆ ನೀಡಿದ್ದ ಗುಡಿಬಂಡೆ ತಾಲೂಕಿನ ಗರುಡಾಚಾರ್ಲಹಳ್ಳಿ ನಾಟಿ ವೈದ್ಯನನ್ನು ಬಾಗೇಪಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ವೆಂಕಟರವಣಪ್ಪ (62) ಆರೋಪಿ. ವಿಷ ಮಿಶ್ರಿತ ಊಟ ಸವಿಸಿ ಒಂದೇ ಕುಟುಂಬದ 8 ಜನರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಪಂನ ಬ್ರಾಹ್ಮಣಹಳ್ಳಿ ಮೂಲದ ವ್ಯಕ್ತಿಯಿಂದ ವ್ಯವಹಾರ ಮಾತನಾಡಿ ವಿಷದ ಮಾತ್ರೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದ ತಂಡ ವೆಂಕಟರವಣಪ್ಪನ ಮನೆಯಲ್ಲಿ ಶೋಧ ಮಾಡಿ ಮನೆಯಲ್ಲಿ ನಾಟಿ ಮದ್ದು ಸಿದ್ಧಪಡಿಸುವ ಯಂತ್ರ, ಗಿಡಮೂಲಿಕೆಗ ಮಿಶ್ರಣದಿಂದ ತೈಯಾರಿಸಿರುವ ಔಷಧವನ್ನು ವಶಕ್ಕೆ ಪಡೆದಿದೆ.
ಸಣ್ಣ ಪುಟ್ಟ ಮಾಟ, ಮಂತ್ರ ಮಾಡಿಕೊಂಡು ನಾಟಿ ಔಷಧ ವಿತರಿಸಿ ಜೀವನ ನಡೆಸುತ್ತಿದ್ದ ನಾಟಿ ವೈದ್ಯನ ಕರಾಳ ಬಯಲಾಗುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ನಿಮಾರ್ಣಗೊಂಡಿದೆ.