ಗೌರಿಬಿದರವರು ತಾಲೂಕಿನ ಚೌಳೂರು ಗೇಟ್ ತನಿಖಾ ಠಾಣೆ ಬಳಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಸೇಂದಿ ಸಾಗಾಣಿಕೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ. ಎಂ.ಮಂಜುನಾಥ, ಸಿಬ್ಬಂದಿ ರಮೇಶ್ ಟಿ.ಕೋಟೆವಾಲ, ಬಿ.ಎನ್.ರಾವೇಂದ್ರ, ರಾಜಣ್ಣ, ಬೇಬಿ ರಾಣಿ ಇದ್ದರು.
- ಅಬಕಾರಿ ಅಧಿಕಾರಿಗಳು ದಾಳಿ
- ಟಯೋಟೋ ಇಟಿಯಾಸ್ ವಾಹನ ಮತ್ತು 6 ಲೀ. ಸೇಂದಿ ವಶ
- ಎನ್.ವೀರಭದ್ರಾರಾಧ್ಯ ವಿರುದ್ಧ ಪ್ರಕರಣ
ಗೌರಿಬಿದನೂರು: ತಾಲೂಕಿನ ಚೌಳೂರು ಗೇಟ್ ತನಿಖಾ ಠಾಣೆ ಬಳಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಸೇಂದಿ ಸಾಗಾಣಿಕೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.ದಾಳಿ ವೇಳೆ ಟಯೋಟೋ ಇಟಿಯಾಸ್ ವಾಹನ ಮತ್ತು 6 ಲೀ. ಸೇಂದಿ ವಶಪಡಿಸಿಕೊಳ್ಳಲಾಗಿದೆ. ನೆರೆಯ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಂಕೇನಹಳ್ಳಿಯ ಎನ್.ವೀರಭದ್ರಾರಾಧ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಎಂ.ಮಂಜುನಾಥ, ಸಿಬ್ಬಂದಿ ರಮೇಶ್ ಟಿ.ಕೋಟೆವಾಲ, ವಾಹನ ಚಾಲಕ ಬಿ.ಎನ್.ರಾವೇಂದ್ರ, ಗೃಹರಕ್ಷಕ ದಳದ ರಾಜಣ್ಣ ಮತ್ತು ಬೇಬಿ ರಾಣಿ ಪಾಲ್ಗೊಂಡಿದ್ದರು.