ಮೃತ ಇಸ್ಮಾಯಿಲ್‌ ಹಾಗೂ ಆರೋಪಿ ಜಾಫರ್ 
ಚಿಕ್ಕಬಳ್ಳಾಪುರ

ಮದ್ಯ ಸೇವನೆ ವೇಳೆ ಪತ್ನಿಯ ವಿಚಾರ ಪ್ರಸ್ತಾಪಕ್ಕೆ ಕೋಪ: ಗೆಳೆಯನ ಕೊಲೆ

ಚಿಕ್ಕಬಳ್ಳಾಪುರ: ಇಲ್ಲಿನ ಗಂಗಮ್ಮನಗುಡಿಯ ನಿವಾಸಿ ಇಸ್ಮಾಯಿಲ್‌ಪಾಷಾ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಮದ್ಯದ ನಶೆಯಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕವಿಚಾರವಾಗಿ ನಡೆದ ಮಾತಿನ ಚಕಮಕಿಯೇ ಪ್ರಮುಖ ಕಾರಣ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. (

alcohol-friend-murdered)

ಉತ್ತರಪ್ರದೇಶ ಮೂಲದ ಜಾಫರ್‌ (೩೦) ಆರೋಪಿ. ದುರ್ಘಟನೆಯು ನಡೆದಹಿಂದಿನ ದಿನ ಮೃತನು ಓಡಾಡಿದ್ದ ಸ್ಥಳಗಳಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ ವೇಳೆಇಸ್ಮಾಯಿಲ್‌ ಹಾಗೂ ಜಾಫರ್‌ ರಾತ್ರಿ ಬಾರ್‌, ಚಿಲ್ಲರೆ ಅಂಗಡಿಯಲ್ಲಿ ಆತ್ಮೀಯತೆಯಿಂದಪರಸ್ಪರ ಮಾತನಾಡುತ್ತಿದ್ದ ದೃಶ್ಯಗಳುಪತ್ತೆಯಾಗಿದ್ದವು. ಇದನ್ನಾಧಾರಿಸಿ ತನಿಖೆ ಕೈಗೊಂಡಾಗ ಆರೋಪಿಯು ನಾಪತ್ತೆಯಾಗಿರುವುದು ತಿಳಿದುಬಂದಿದೆ. ಕೊಲೆ ಮಾಡಿ ಚಿಕ್ಕಬಳ್ಳಾಪುರ ಬಿಟ್ಟು ಉತ್ತರ ಪ್ರದೇಶಕ್ಕೆ ಪರಾರಿಯಾಗುತ್ತಿದ್ದವನನ್ನುಪೊಲೀಸರು ವಶಪಡಿಸಿಕೊಂಡು, ಇದೀಗ ಜೈಲಿಗೆ ಕಳುಹಿಸಿದ್ದಾರೆ.

*ಪತ್ನಿ ವಿಚಾರಕ್ಕೆ ಗಲಾಟೆ

ಆರೋಪಿ ಜಾಫರ್‌ ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಕೂಲಿ ಕಾರ್ಮಿಕ.ಈತನನ್ನು ಹೆಂಡತಿ ಬಿಟ್ಟು ಹೋಗಿದ್ದಳು. ಇದರಿಂದ ಮನನೊಂದು ಹೆಚ್ಚಿಗೆ ಮದ್ಯ ಸೇವಿಸುತ್ತಿದ್ದ.ಇದಕ್ಕೆ ಬಾರ್‌ ಗೆ ಹೋಗುತ್ತಿದ್ದಾಗ ಇಸ್ಮಾಯಿಲ್‌ ಪರಿಚಯವಾಗಿದ್ದಾನೆ. ಅಪರೂಪಕ್ಕೆ ಎನ್ನುವಂತೆಇಬ್ಬರು ಒಂದೆಡೆ ಕುಳಿತು ಕುಡಿದು ಕಾಲ ಕಳೆಯುತ್ತಿದ್ದರು. ಅದರಂತೆ ಕಳೆದ ಜು.೩೧ ರಂದು ರೈಲ್ವೆನಿಲ್ದಾಣ ಬಳಿ ಸೇರಿದ್ದಾರೆ. ಕುಡಿತದ ನಶೆಯಲ್ಲಿ ಇಬ್ಬರು ಚರ್ಚಿಸುವ ಸಂದರ್ಭದಲ್ಲಿ ಜಾಫರ್‌ಪತ್ನಿಯ ವಿಚಾರ ಪ್ರಸ್ತಾಪವಾಗಿದೆ. ಇದರ ಮಾತಿನ ಚಕಮಕಿಯಲ್ಲಿ ಕೋಪಗೊಂಡ ಆರೋಪಿಯು ಪಕ್ಕದಲ್ಲಿದ್ದದೊಡ್ಡ ಕಲ್ಲನ್ನು ತೆಗೆದುಕೊಂಡು ಇಸ್ಮಾಯಿಲ್‌ ಪಾಷಾ ತಲೆಗೆ ಹಲವು ಬಾರಿ ಹೊಡೆದು ಕೊಲೆಮಾಡಿದ್ದಾನೆ.

*ಪ್ರಕರಣದ ಹಿನ್ನೆಲೆ

ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪ ಪೈಂಟರ್ ಇಸ್ಮಾಯಿಲ್‌ ನರಕ್ತಸಿಕ್ತ ಮೃತದೇಹ ಪತ್ತೆಯಾಗಿತ್ತು. ತಡರಾತ್ರಿ ಮನೆಯಿಂದ ಹೊರಗೆ ಹೋದವನು ಮತ್ತೆ ವಾಪಸ್‌ ಬಂದಿರಲಿಲ್ಲ.ಇದರ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.