ಶಿಡ್ಲಟ್ಟ: ಎಲ್ಲ ಮನೆಗಳಲ್ಲೂ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕೆಲಸವಾಗಬೇಕು. ಶಾಲಾ ಕಾಲೇಜುಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಆತ್ಮಸ್ಥೆರ್ಯ ತುಂಬಬೇಕು ಎಂದು ಗ್ರೇಡ್&2 ತಹಸೀಲ್ದಾರ್ ಕೆಎನ್ಎಂ ಮಂಜುನಾಥ್ ತಿಳಿಸಿದರು.
ತಾಲೂಕಿನ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿಯಲ್ಲಿ ಮಾತನಾಡಿ, ಸಮಾಜದಲ್ಲಿ ಸಾಂಪ್ರದಾಯಿಕ ಮತ್ತು ಕಾನೂನು ಬದ್ಧವಾಗಿಯೂ ಹೆಣ್ಣು ಮಕ್ಕಳ ಆದ್ಯತೆಗೆ ಒತ್ತು ನೀಡಿ ಸಮಾನ ಅವಕಾಶ ಕಲ್ಪಿಸಲಾಗಿದೆ. ಹೆಣ್ಣು ಮಕ್ಕಳಲ್ಲಿನ ಹಿಂಜರಿಕೆ, ಶಿಕ್ಷಣ, ಮಾರ್ಗದರ್ಶನ, ಅವಕಾಶಗಳ ಕೊರತೆಯಿಂದ ಅನೇಕ ೇತ್ರಗಳಲ್ಲಿ ಹಿಂದುಳಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ವೀರ ವನಿತೆ ಒನಕೆ ಓಬವ್ವ ಅವರ ಸಮಯ ಪ್ರೆ, ಧೈರ್ಯ ಮತ್ತು ಸಾಹಸಗಳು ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದರು.
ಚಲವಾದಿ ೇಮಾಭಿವೃದ್ಧಿ ಸಂದ ಜಿಲ್ಲಾಧ್ಯಕ್ಷ ಬಿ.ತ್ಯಾಗರಾಜ್, ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ, ಸಮಾಜ ಕಲ್ಯಾಣ ಇಲಾಖೆ ಜಗದೀಶ್, ಪಶು ವೈದ್ಯಾಧಿಕಾರಿ ಡಾ.ಶ್ರೀನಾಥ್ ಇತರರು ಇದ್ದರು.
ಸಮುದಾಯದಿಂದ ಪ್ರತಿಭಟನೆ
ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಲವಾದಿ ಸಮುದಾಯದ ಮುಖಂಡರು, ಸಮುದಾಯದವರನ್ನು ಆಹ್ವಾನಿಸದೆ, ಪೂರ್ವಭಾವಿ ಸಭೆಯನ್ನೂ ನಡೆಸದೆ ಕಾಟಾಚಾರಕ್ಕೆ ಜಯಂತಿ ನಡೆಸಿದ ಕುರಿತು ಛಲವಾದಿ ಸಮುದಾಯದ ಮುಖಂಡರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಯಂತಿಯಲ್ಲಿ ತಹಸೀಲ್ದಾರ್ ಸೇರಿ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಇದಕ್ಕೆ ಆೇಪ ವ್ಯಕ್ತಪಡಿಸಿದ ಮುಖಂಡರು, ಎಲ್ಲ ಜಯಂತಿಗಳಿಗೂ ಪೂರ್ವಭಾವಿ ನಡೆಸಲಾಗುತ್ತಿದ್ದು, ಓಬವ್ವ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ ಕರೆದಿಲ್ಲ. ಕೇವಲ ಫೋಟೋ ಇಟ್ಟು ಪೂಜೆ ಸಲ್ಲಿಸಿ ಕಾರ್ಯಕ್ರಮ ಮುಗಿಸಲಾಗುತ್ತಿದೆ ಎಂದು ಮುಖಂಡರು ದೂರಿದರು.
ಒನಕೆ ಓಬವ್ವ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಇಡೀ ಸಮಾಜ, ದೇಶಕ್ಕೆ ಕೀರ್ತಿ ತಂದವರು. ಜಯಂತಿ ಆಚರಿಸುವಾಗ ಎಲ್ಲ ಸಮುದಾಯ, ಸಂ&ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸಮುದಾಯವನ್ನು ರ್ನಿಲಸಿರುವುದರಿಂದ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಜಯಂತಿ ಆಚರಿಸಲಾಯಿತು.