ಗುಡಿಬಂಡೆ ತಾಲೂಕಿನ ಜಂಬಿಗೇಮರದಹಳ್ಳಿ ಸರ್ವೇ ನಂ.23 ರಲ್ಲಿ ನಿರ್ಮಿಸಿರುವ ನಾಡಕಚೇರಿ.
- 5 ವರ್ಷಗಳಾದರೂ ಉದ್ಘಾಟನೆ ಭಾಗ್ಯ ಇಲ್ಲ
- ಸೋಮೇನಹಳ್ಳಿ ಹೋಬಳಿಯ ಖಾಸಗಿ ಕಟ್ಟಡದಲ್ಲಿ ಕರ್ತವ್ಯ
- ಸಾರ್ವಜನಿಕರಿಗೆ ಅನುಕೂಲ ಆಗುವ ಸ್ಥಳಗಳಲ್ಲಿ ಸರ್ಕಾರಿ ಕಚೇರಿ ಪ್ರಾರಂಭಿಸಿ
ಎನ್.ವಿ.ವೆಂಕಟೇಶ್ ಗುಡಿಬಂಡೆ
ಸಾರ್ವಜನಿಕರಿಗೆ ಅನುಕೂಲ ಆಗುವ ಸ್ಥಳಗಳಲ್ಲಿ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಯಮಗಳನ್ನು ಗಾಳಿಗೆ ತೂರಿ ರ್ನಿಜನ ಪ್ರದೇಶದಲ್ಲಿ ನಾಡಕಚೇರಿ ನಿರ್ಮಿಸಿಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಹೌದು, ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಕೃಷಿಸಂಬಂಧಿತ ಸೇವೆಗಳು, ಸಾಮಾಜಿಕ ಭದ್ರತಾ ಯೋಜನೆಗಳು, ಭೂ ದಾಖಲೆಗಳು ಸೇರಿ ಅನೇಕ ಯೋಜನೆ ಪಡೆಯಲು ನಾಡಕಚೇರಿ ಸಹಕಾರಿ.
ಅದರಂತೆ ತಾಲೂಕಿನ ಸೋಮೇನಹಳ್ಳಿ ಹೋಬಳಿ ಕೇಂದ್ರದ ಖಾಸಗಿ ಕಟ್ಟಡದಲ್ಲಿ ನಾಡಕಚೇರಿ ಪ್ರಾರಂಭಿಸಿದ್ದಾರೆ. ಇನ್ನು ನಾಡಕಚೇರಿಗೆ ಸ್ವಂತ ಕಟ್ಟಡ ಇರಬೇಕೆಂಬ ಉದ್ದೇಶದಿಂದ ಜಂಬಿಗೇಮರದಹಳ್ಳಿ ಸುಮಾರು 15 ಲಕ್ಷ ರೂ.ಗಳಿಗೂ ಅಧಿಕ ಅನುದಾನದಲ್ಲಿ 5 ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಿದ್ದಾರೆ. ಜತೆಗೆ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದಾರಾದರೂ ಈವರೆಗೂ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸರ್ಕಾರಿ ಕಟ್ಟಡ ನಿರ್ಮಿಸಿದ್ದರೂ ಖಾಸಗಿ ಕಟ್ಟಡದಲ್ಲೇ ಕಚೇರಿ ಮುಂದುವರಿಸಿ ವಿನಾಕಾರಣ ಬಾಡಿಗೆ ನೀಡುತ್ತಿದ್ದಾರೆ. ಆ ಮೂಲಕ ಜನರ ತೆರಿಗೆ ದುರುಪಯೋಗವಾಗುತ್ತಿದೆ
ಅವೈಜ್ಞಾನಿಕವಾಗಿ ನಿಮಾರ್ಣ: ಸರ್ಕಾರದ ಅನುದಾನ ಬಳಕೆ ಮಾಡಲೇಬೇಕೆಂಬ ಉದ್ದೇಶದಿಂದ ಜಂಬಿಗೇಮರದಹಳ್ಳಿಯ ರ್ನಿಜನ ಪ್ರದೇಶದಲ್ಲಿ ಯಾವುದೇ ವಾಹನಗಳ ಸೌಲಭ್ಯವಿಲ್ಲದಿರುವ ಕಡೆ ಸೋಮೇನಹಳ್ಳಿಯಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿ ನಾಡಕಚೇರಿ ನಿರ್ಮಿಸಿದ್ದಾರೆ.ನಾಡಕಚೇರಿಯ ಸೇವೆ ಪಡೆಯಲು ಶಾಲಾ ಮಕ್ಕಳು, ವೃದ್ಧರು, ಅಂಗವಿಕಲರು ಸೇರಿ ಅನೇಕ ಜನರು ಬರಬೇಕಾಗಿರುತ್ತದೆ. ಆದರೆ ಸೂಕ್ತ ವಾಹನದ ವ್ಯವಸ್ಥೆಯೂ ಇಲ್ಲದ ಕಡೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಡಕಚೇರಿಯನ್ನುಇನ್ನೂ ಉದ್ಘಾಟಿಸಿಲ್ಲ. ಆದರೂ ತಾಪಂ 5 ಲಕ್ಷ ರೂ.ಅನುದಾನದಲ್ಲಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಎಂದು ಕೆಲವರು ಒಂದು ಕುರ್ಚಿಯನ್ನುಹಾಕಿ 5 ಲಕ್ಷ ಗುಳುಂ ಮಾಡಿದ್ದಾರೆ, ಇದೇ ರೀತಿ ಇದ್ದರೆ ಈ ಕಚೇರಿಯ ಅಭಿವೃದ್ಧಿ ಕಾರ್ಯಗಳು ಎಂಬ ಹೆಸರಿನಲ್ಲಿ ಹಣ ನುಂಗಿದರೂ ಅಚ್ಚರಿಯೇನಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಒಂದು ಕಡೆ ಕೆಲ ಗ್ರಾಮಸ್ಥರು ನಾಡಕಚೇರಿ ಕಟ್ಟಡ ಉದ್ಘಾಟಿಸಿ ಎಂದು ಒತ್ತಾಯಿಸುತ್ತಿದ್ದರೆ, ಇನ್ನು ಕೆಲವರು ಹೋಬಳಿ ಕೇಂದ್ರದಿಂದ ನೂತನ ಕಟ್ಟಡಕ್ಕೆ ವರ್ಗಾವಣೆ ಮಾಡಿದರೆ ನಾವು ಪ್ರತಿಭಟನೆ ಮಾಡುತ್ತೇವೆ. ಬೇಕಾದರೆ ಖಾಸಗಿ ಕಟ್ಟಡದಿಂದ ಗ್ರಾಪಂ ಕಟ್ಟಡಕ್ಕೆ ವರ್ಗಾವಣೆ ಮಾಡಿ. ಸೋಮೇನಹಳ್ಳಿಯಲ್ಲೇ ನಾಡಕಚೇರಿ ಇರಲಿ ಎನ್ನುತ್ತಿದ್ದಾರೆ.
ಹಲವು ವರ್ಷಗಳ ಹಿಂದೆ ಸೋಮೇನಹಳ್ಳಿಯಿಂದ ಸ್ವಲ್ಪ ದೂರದಲ್ಲಿ ನಾಡಕಚೇರಿಯ ಸ್ವಂತ ಕಟ್ಟಡ ನಿರ್ಮಿಸಿದ್ದೇವೆ. ಆದರೂ ಜನರು ದೂರ ಆಗುತ್ತದೆ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇನೆ.
| ಸಿಗ್ಬತ್ವುಲ್ಲಾ ತಹಸೀಲ್ದಾರ್, ಗುಡಿಬಂಡೆ
5 ವರ್ಷಗಳ ಹಿಂದೆ ಜಂಬಿಗೇ ಮರದಹಳ್ಳಿ ಸರ್ವೇ ನಂ.23ರಲ್ಲಿ ನಾಡಕಚೇರಿ ನಿರ್ಮಿಸಿದ್ದಾರೆ. ಆದರೆ ಉದ್ಘಾಟನೆ ಮಾಡಿಲ್ಲ. ಇಲ್ಲಿ ಯಾವುದೇ ಸರ್ಕಾರಿ ಕೆಲಸಗಳು ನಡೆ ಯದೇಇರುವುದರಿಂದ ಕುಡುಕರ ಅಡ್ಡೆಯಾಗಿದೆ.ಈಗಾಗಲೇ ಶೌಚಗೃಹಕ್ಕೆ ಅಳವಡಿಸಿರುವ ಬಾಗಿಲುಗಳು ಧ್ವಂಸವಾಗಿವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಜನರ ತೆರಿಗೆಯಲ್ಲಿ ನಿರ್ಮಿಸಿರುವ ನಾಡಕಚೇರಿ ಪ್ರಾರಂಭಿಸಬೇಕಿದೆ.
| ಶ್ರೀನಿವಾಸ ಜಂಬಿಗೇಮರದಹಳ್ಳಿ
ಸೋಮೇನಹಳ್ಳಿ ಕೇಂದ್ರದಿಂದ 2 ಕಿಲೋ ಮೀಟರ್ ದೂರದಲ್ಲಿ ನಾಡಕಚೇರಿ ನಿರ್ಮಿಸಿ ದ್ದಾರೆ, ರ್ನಿಜನ ಪ್ರದೇಶ ವಾದ್ದರಿಂದ ಜನರಿಗೆ ಅನಾನುಕೂಲ ಆಗುತ್ತದೆ. ಹಾಗಾಗಿ ಸೋಮೇನ ಹಳ್ಳಿಯಲ್ಲೇ ನಾಡಕಚೇರಿ ಇರಬೇಕು. ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ.
| ಅಶ್ವತ್ಥಪ್ಪ ಸೋಮೇನಹಳ್ಳಿ ಗ್ರಾಮಸ್ಥ