ಬಾಗೇಪಲ್ಲಿ ತಾಲೂಕಿನ ಂಟ್ಲಮಲ್ಲಮ್ಮ ಡ್ಯಾಂ ಜಮೀನು ಅವ್ಯವಹಾರ ತನಿಖೆ ನಡೆಸುವಂತೆ ಸಂಸದ ಡಾ.ಕೆ.ಸುಧಾಕರ್​ ತಹಸೀಲ್ದಾರ್​ ಮನಿಷಾಪತ್ರಿ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುತ್ತಿರುವುದು. 
ಚಿಕ್ಕಬಳ್ಳಾಪುರ

ಬಾಂಬೆ ಮಾದರಿ ಭೂ ಮಾಫಿಯಾ?

ಬಾಗೇಪಲ್ಲಿ ಶಾಸಕರ ಕುಮ್ಮಕ್ಕಿನಿಂದ ರೈತರ ಜಮೀನು ವಶ ಸಂಸದ ಡಾ.ಕೆ.ಸುಧಾಕರ್​ ಆಕ್ರೋಶ - ಶಾಸಕ ಸುಬ್ಬಾರೆಡ್ಡಿ ವಿರುದ್ಧ ಭೂಹಗರಣ ದಾಖಲೆ ಪ್ರದರ್ಶನ

ಬಾಗೇಪಲ್ಲಿ: ಜಿಲ್ಲಾಡಳಿತ ಹಾಗೂ ಸ್ಥಳಿಯ ಶಾಸಕರ ಕುಮ್ಮಕ್ಕಿನಿಂದ ರಾತ್ರೋರಾತ್ರಿ ರೈತರ ಜಮೀನುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಾಗೇಪಲ್ಲಿ ೇತ್ರದಲ್ಲಿ ಬಾಂಬೆ ಮಾದರಿಯ ಭೂ ಮಾಫಿಯಾ ನಡೆಯುತ್ತಿದೇಯೇ ಎಂದು ಸಂಸದ ಡಾ.ಕೆ.ಸುಧಾಕರ್​ ಪ್ರಶ್ನಿಸಿದರು.

ಶಾಸಕ ಸುಬ್ಬಾರೆಡ್ಡಿ ಭೂ ಹಗರಣ ಹಾಗೂ ಕಾಂಗ್ರೆಸ್​ ಭ್ರಷ್ಟಾಚಾರ ವಿರುದ್ಧ ಎನ್​ಡಿಎ ಮುಖಂಡ ಹರಿನಾಥರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿ, ರೈತರ ಜಮೀನುಗಳನ್ನು ಕೊಳ್ಳೆ ಹೊಡೆದು ಅವರ ಕಣ್ಣೀರಿನ ಶಾಪಕ್ಕೆ ಗುರಿಯಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲೆ ಬಿಟ್ಟು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಜೈಲಿಗೆ ಹಾಕಿಸುತ್ತೇನೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಡಾ.ಕೆ.ಸುಧಾಕರ್​ ಅಡ್ಡಿಪಡಿಸುವುದಿಲ್ಲ. ನ್ಯಾಯಯುತವಾಗಿ ರೈತರ ಜಮೀನುಗಳನ್ನು ಸ್ವಾಧಿನಪಡಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಿದ್ದರೆ ನಮ್ಮ ಆೇಪವಿಲ್ಲ. ಂಟ್ಲಮಲ್ಲಮ್ಮ ಡ್ಯಾಂ ವ್ಯಾಪ್ತಿಯ ರೈತರಿಗೆ ಯಾವುದೇ ನೋಟಿಫಿಕೇಷನ್​ ನೀಡದೆ ಬಾಂಬೆ ಭೂ ಮಾಫೀಯಾ ಮಾದರಿಯಲ್ಲಿ ರೈತರನ್ನು ಜಿಲ್ಲಾಡಳಿತ, ತಾಲೂಕು ಆಡಳಿತ, ಶಾಸಕರು ಬೆದರಿಸಿ ಜಮೀನು ಕಸಿದುಕೊಂಡಿರುವುದು ಕಾನೂನು ಬಾಹಿರ ಎಂದರು.

ಸರ್ಕಾರಿ ಯೋಜನೆಗಳ ಮಾಹಿತಿ ಮೊದಲೇ ಪಡೆದುಕೊಂಡು ಅಲ್ಲಿನ ರೈತರ ಜಮೀನುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಸರ್ಕಾರದಿಂದ ಕೋಟಿ ಕೋಟಿ ಪರಿಹಾರ ಪಡೆದುಕೊಳ್ಳುವ ಭೂ ಮಾಫಿಯಾ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಜಿ.ಪ್ರಭುಗೆ 3 ತಿಂಗಳ ಹಿಂದೇಯೆ ದೂರು ಸಲ್ಲಿಸಿದ್ದರೂ ಇದುವರೆಗೂ ತನಿಖೆ ನಡೆಸಿಲ್ಲ. ಈ ಬಗ್ಗೆ ರೈತರು ವೇದಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತ ಉತ್ತರ ನೀಡಬೇಕಾಗಿದೆ ಎಂದರು.

ಎನ್​ಡಿಎ ಮುಖಂಡ ಹರಿನಾಥರೆಡ್ಡಿ ಮಾತನಾಡಿ, ಹೊಸಹುಡ್ಯ ಬಳಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ಜಮೀನನ್ನು ಶಾಸಕ ಸುಬ್ಬಾರೆಡ್ಡಿ ಪುತ್ರಿಯ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಸರ್ಕಾರಿಂದ ನೂರಾರು ಕೋಟಿ ಪರಿಹಾರ ಪಡೆದುಕೊಂಡಿದ್ದಾರೆ. ಕಸಬಾ ಹೋಬಳಿಯಲ್ಲಿ ಾಮ್​ರ್&53ರಲ್ಲಿ ಅರ್ಜಿ ಸಲ್ಲಿಸಿರುವ ಒಬ್ಬ ರೈತನಿಗೂ ಇದುವರೆಗೂ ಖಾತೆ ಮಾಡಿಕೊಟ್ಟಿಲ್ಲ. ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ, ಕೈಗಾರಿಕಾ ಅಭಿವೃದ್ಧಿ ವಿಚಾರದಲ್ಲಿ ಜಮೀನು ಲೂಟಿ, ಗ್ರಾಪಂಗೊಂದು ಬಾರ್​ ತೆರೆದು ಯುವ ಪೀಳಿಗೆಯನ್ನು ಹಾಳು ಮಾಡುತ್ತಿದ್ದಾರೆ. 15 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಶಾಶ್ವತ ಅಭಿವೃದ್ಧಿ ಕೆಲಸಗಳಾಗದೇ, ಅಭಿವೃದ್ಧಿ ವಿಚಾರವನ್ನು ಮೂಲೆ ಗುಂಪು ಮಾಡಿ ಎನ್​ಡಿಎ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದರೆ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ಟಿ.ಕೋನಪರೆಡ್ಡಿ, ಜೆ.ಪಿ.ಚಂದ್ರಶೇಖರರೆಡ್ಡಿ, ಆ.ನ.ಮೂರ್ತಿ, ಎಸ್​.ಆರ್​.ಲ್ಮನಾರಾಯಣ, ಪಿ.ಎ.ನಾಗರಾಜುರೆಡ್ಡಿ, ಗುಜ್ಜೇಪಲ್ಲಿ ಸುಧಾಕರರೆಡ್ಡಿ, ವಿ.ವೆಂಕಟಶಿವಾರೆಡ್ಡಿ, ಗುಡಿಬಂಡೆ ಮಂಜುನಾಥ್​ರೆಡ್ಡಿ, ತಟ್ಟಹಳ್ಳಿ ಮದ್ದಿರೆಡ್ಡಿ, ಏಟಿಗಡ್ಡಪಲ್ಲಿ ಸುನೀಲ್​ ರೆಡ್ಡಿ, ಕೆ.ಟಿ.ವೀರಾಂಜನೇಯ ಇತರರು ಇದ್ದರು.

ತನಿಖೆಗೆ ಸಂಸದರ ಆಗ್ರಹ: ಬಾಗೇಪಲ್ಲಿ ತಾಲೂಕಿನ ಂಟ್ಲಮಲ್ಲಮ್ಮ ಡ್ಯಾಂ ವ್ಯಾಪ್ತಿಯಲ್ಲಿ ಜಮೀನು ಕಳೆದುಕೊಂಡಿರುವ ರೈತರು ಸಂಸದ ಡಾ.ಕೆ.ಸುಧಾಕರ್​ ನೇತೃತ್ವದಲ್ಲಿ ತಹಸೀಲ್ದಾರ್​ ಕಚೇರಿಗೆ ತೆರಳಿ ತಹಸೀಲ್ದಾರ್​ ಮನೀಷಾ ಪತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸಮಗ್ರ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡುವಂತೆ ತಹಸೀಲ್ದಾರ್​ ಮೂಲಕ ಜಿಲ್ಲಾಧಿಕಾರಿಗೆ ಮನವಿ ರವಾನಿಸಿದರು.

ಮದ್ಯದ ಬಾಟಲಿ ಹಿಡಿದು ಮೆರವಣಿಗೆ: ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆ ಖಂಡಿಸಿ ರೈತ ಮಹಿಳೆಯರು ಮದ್ಯದ ಬಾಟಲಿ ಹಾರಗಳನ್ನು ಹಿಡಿದು ಪಟ್ಟಣದ ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಶಾಸಕ ಸುಬ್ಬಾರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.