ಶಿಡ್ಲಘಟ್ಟದ 3ನೇ ವಾರ್ಡ್​ನಲ್ಲಿ ನಗರಸಭೆಯಿಂದ ಕೊಳವೆ ಬಾವಿ ಕೊರೆಸಲಾಯಿತು. ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಸ್ಥಳಿಯರಾದ ಮನೋಹರ್​, ನವೀನ್​, ನಾಗರಾಜ್​ ಇದ್ದರು. 
ಚಿಕ್ಕಬಳ್ಳಾಪುರ

9 ಲಕ್ಷ ವೆಚ್ಚದಲ್ಲಿ 13 ಕೊಳವೆ ಬಾವಿ

ಪ್ರಮುಖ ಮುಖ್ಯಾಂಶಗಳು

  • ನೀರಿನ ಬವಣೆ ನೀಗಿಸಲು ಮುಂದಾದ ನಗರಸಭೆ
  • 2024-&25ನೇ ಸಾಲಿನ 15ನೇ ಹಣಕಾಸು ಯೊಜನೆ
  • 3ನೇ ವಾರ್ಡ್​ನಲ್ಲಿ ಗುರುವಾರ ನಗರಸಭೆಯಿಂದ ಭೂಮಿ ಪೂಜೆ
ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
2024-&25ನೇ ಸಾಲಿನ 15ನೇ ಹಣಕಾಸು ಯೊಜನೆಯಡಿ 60 ಲಕ್ಷ ರೂ., ಎಸ್​.ಎಫ್​.ಸಿ ಯೋಜನೆಯಲ್ಲಿ 9ಲಕ್ಷ ಒಟ್ಟುಗೂಡಿಸಿ ನಗರದಲ್ಲಿ 13 ಕೊಳವೆ ಬಾವಿ ಕೊರೆಸಲಾಗುತ್ತಿದೆ ಎಂದು ನಗರಸಭೆ ಸದಸ್ಯೆ ಚಿತ್ರಾ ಮನೋಹರ್​ ತಿಳಿಸಿದರು.
ನಗರದ 3ನೇ ವಾರ್ಡ್​ನಲ್ಲಿ ಗುರುವಾರ ನಗರಸಭೆಯಿಂದ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ನಗರದ ವಿವಿಧೆಡೆ ಈಗಾಗಲೇ ಸ್ಥಳ ಗುರುತಿಸಿದ್ದು, ಕೊಳವೆ ಬಾವಿ ಕೊರೆಸಲಾಗುತ್ತದೆ ಎಂದರು.
ನಗರಸಭೆ ಸದಸ್ಯ ಎಲ್​.ಅನಿಲ್​ ಕುಮಾರ್​ ಮಾತನಾಡಿ, ಮುಂದಿನ ಬೇಸಿಗೆಯೊಳಗೆ ನಗರದಲ್ಲಿ ನೀರಿನ ಕೊರತೆಯುಂಟಾಗಬಾರದು, ಒಂದು ವೇಳೆ ಯಾವುದೇ ಕೊಳವೆ ಬಾವಿಗಳ ಮೋಟರ್​ ಪಂಪ್​ ಕೆಟ್ಟರೂ ನೀರಿನ ಕೊರತೆಯಾಗಬಾರದೆಂದು ದೂರದೃಷ್ಟಿಯಿಂದ ಬಾವಿ ಕೊರೆಸುತ್ತಿರುವುದಾಗಿ ಹೇಳಿದರು. ಜಿಪಂ ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ ಮಾತನಾಡಿ, ನಗರದ ನಾಗರಿಕರು ನಗರಸಭೆಯಿಂದ ಬಯಸುವುದು ನೀರು, ಸ್ವಚ್ಛತೆ, ಬೀದಿ ದೀಪ ಸೌಕರ್ಯ ಒದಗಿಸಿದಲ್ಲಿ ಯಾರೊಬ್ಬರೂ ಆಕ್ಷೇಪಣೆ ಮಾಡುವುದಿಲ್ಲ ಎಂದರು.