ಜಿಲ್ಲೆ

ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಿ

Chitradurga

ಚಿಕ್ಕಜಾಜೂರು: ಕೆಲ ವರ್ತಕರಿಗೆ ಲಾಕ್‌ಡೌನ್ ಸಡಿಲಿಕೆಗೆ ಆದೇಶವಿದ್ದು, ತಾವುಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ವಹಿವಾಟು ನಡೆಸಬೇಕು ಎಂದು ಪಿಎಸ್‌ಐ ಕೆ.ಮೋಹನ್ ಕುಮಾರ್ ತಿಳಿಸಿದರು.

ಗ್ರಾಮ ಠಾಣೆ ಆವರಣದಲ್ಲಿ ಶುಕ್ರವಾರ ಕರೆದಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್, ಕಂದಾಯ ಇಲಾಖೆಯ ಸಿದ್ದಪ್ಪ, ಪಿಡಿಒ ಪುನೀತ್, ಕೃಷ್ಣನಾಯಕ್ ಇದ್ದರು.