ಚಿಕ್ಕಜಾಜೂರು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 7ರಿಂದಲೆ ರೈಲು, ಬಸ್ ಸಂಚಾರ ಸೇರಿ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು. ಮುಖ್ಯರಸ್ತೆ, ರೈಲು, ಬಸ್ ನಿಲ್ದಾಣ ಜನರಿಲ್ಲದೆ ಭಣಗುಡುತ್ತಿದ್ದವು.
ಸಂಜೆ 5 ಗಂಟೆಗೆ ಗ್ರಾಮಸ್ಥರೆಲ್ಲರೂ ಮನೆ ಛಾವಣಿ ಏರಿ ಕರೊನಾ ತಡೆಗೆ ಶ್ರಮಿಸುತ್ತಿರುವ ಆರೋಗ್ಯ ಮತ್ತು ರಕ್ಷಣಾ ಸಿಬ್ಬಂದಿಗೆ ಚಪ್ಪಾಳೆ, ಜಾಗಟೆ ಬಾರಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.