ಜಿಲ್ಲೆ

ಗೃಹರಕ್ಷಕರಿಗೆ ದಿನಸಿನ ಕಿಟ್ ವಿತರಣೆ

ಚಿಕ್ಕಜಾಜೂರು: ಗೃಹರಕ್ಷಕರು ಚುನಾವಣೆ, ಹಬ್ಬ ಮತ್ತು ತುರ್ತು ಸಮಯದಲ್ಲಿ ಪೊಲೀಸ್ ಸಿಬ್ಬಂದಿಗೆ ಸಹಕಾರ ನೀಡುತ್ತಾ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಮಾಜ ಮತ್ತು ದೇಶ ಸೇವೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಪಿಎಸ್‌ಐ ಟಿ.ಎಂ.ಮೋಹನ್‌ಕುಮಾರ್ ಶ್ಲಾಘಿಸಿದರು.

ವೀರಭದ್ರೇಶ್ವರ ಕ್ರಷರ್ ಮಾಲೀಕ ಶಶಿಕುಮಾರ್ ನೀಡಿದ್ದ ಆಹಾರದ ಕಿಟ್‌ಗಳನ್ನು ಚಿಕ್ಕಜಾಜೂರು ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ಗೃಹರಕ್ಷಕ ದಳದ ಸಿಬ್ಬಂದಿಗೆ ವಿತರಿಸಿ ಮಾತನಾಡಿದರು.

ಗೃಹ ರಕ್ಷಕರಾದ ಎಂ.ರೇವಣಸಿದ್ದಪ್ಪ, ಎನ್.ರಾಮಚಂದ್ರಪ್ಪ, ಬಿ.ಕುಮಾರ್, ಎಚ್.ಕೆಂಚಪ್ಪ, ಬಿ.ಎಂ.ನರಸಿಂಹಮೂರ್ತಿ, ಅಣ್ಣಪ್ಪ, ಅವಿನಾಶ್, ಇಲಾಖೆ ಸಿಬ್ಬಂದಿ ಕೃಷ್ಣನಾಯಕ್ ಇದ್ದರು.