ಜಿಲ್ಲೆ

ಹಿರೇಕಂದವಾಡಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ

Chitradurga

ಚಿಕ್ಕಜಾಜೂರು: ಇಲ್ಲಿಗೆ ಸಮೀಪದ ಹಿರೇಕಂದವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವೇದಾಂತ ಮತ್ತು ನಾರಾಯಣ್ ಮೈನ್ಸ್ ಸಂಸ್ಥೆ ಆಶ್ರಯದಲ್ಲಿ ಗಡಿ ಪ್ರದೇಶದ ಶಾಲೆಯಲ್ಲಿ ವಿವಿಧ ಪ್ರತಿಭಾ ಕಾರಂಜಿ ಸ್ಪರ್ಧೆ ಜರುಗಿತು.

ಹಿರೆಕಂದವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜನಪದ ನೃತ್ಯ ಪ್ರಥಮ, ಚಿತ್ರ ಕಲೆ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ, ಇಗ್ಲೀಸ್ ಕಂಠಪಾಠ ದ್ವಿತೀಯ ಸ್ಥಾನ ಪಡೆದು ವಿಜೇತರಾದರು.