ಜಿಲ್ಲೆ

ಚಿಕ್ಕಜಾಜೂರಿನಲ್ಲಿ ವಿಶೇಷ ಪೂಜೆ

Chitradurga

ಚಿಕ್ಕಜಾಜೂರು: ಶ್ರೀ ಆಂಜನೇಯ ಸ್ವಾಮಿ, ರಾಮಕೃಷ್ಣ ಹಾಗೂ ಬನಶಂಕರಿ ದೇವಾಲಯಗಳಲ್ಲಿ ಮಕರ ಸಂಕ್ರಮಣದ ಪೂಜೆ ಸಲ್ಲಿಸಲಾಯಿತು.

ಬೆಳಗ್ಗೆ 5ರಿಂದ 11ಗಂಟೆ ವರೆಗೆ ನೂರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಹಿಳಾ ಸಂಘದ ಸದಸ್ಯರು ಪ್ರಸಾದ ವಿನಿಯೋಗ ಮಾಡಿದರು.