ಜಿಲ್ಲೆ

ಸರ್ಕಾರಿ ಆದೇಶ ಪಾಲಿಸಿ ಮಹಾಮಾರಿ ಓಡಿಸಿ

ಚಿಕ್ಕಜಾಜೂರು: ಕರೊನಾ ಮಾಹಾಮಾರಿ ದೂರ ಮಾಡಲು ಜನತೆ ಸೌಹಾದರ್ತೆಯಿಂದ ಸರ್ಕಾರ ಆದೇಶಿಸಿರುವ ಎಲ್ಲ ಆದೇಶಗಳನ್ನು ಪಾಲಿಸಬೇಕು ಎಂದು ವೃತ್ತ ನಿರೀಕ್ಷಕ ಪಿ.ರವೀಶ್ ಮನವಿ ಮಾಡಿದರು.

ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸರ್ವ ಧರ್ಮಿಯರ ಶಾಂತಿಸಭೆಯಲ್ಲಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್ ಮಾತನಾಡಿ, ಗ್ರಾಮಕ್ಕೆ ಬೇರೆ ರಾಜ್ಯ, ಜಿಲ್ಲೆಗೆ ಆಗಮಿಸಿದರೆ ಆಯಾ ಸಮುದಾಯದ ಮುಖಂಡರೇ ಆರೋಗ್ಯ ತಪಾಸಣೆಗೆ ಕರೆದೊಯ್ಯಬೇಕು ಎಂದು ತಿಳಿಸಿದರು.

ರಸ್ತೆಯಲ್ಲಿ ವಿನಾಕಾರಣ ಓಡಾಡಿದರೆ ಅಂತವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಪಿಎಸ್‌ಐ ಮೋಹನ್‌ಕುಮಾರ್ ಎಚ್ಚರಿಸಿದರು.