ಜಿಲ್ಲೆ

ಚಿಗರಿ ಬಸ್‌ಗಳು ಪರಸ್ಪರ ಡಿಕ್ಕಿ, ಜಖಂ

Gadag - Desk - Tippanna Avadoot

ಹುಬ್ಬಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣ ಚನ್ನಮ್ಮ ವೃತ್ತದ ಬಳಿ ಚಿಗರಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದು ಜಖಂ ಆದ ಘಟನೆ ಗುರುವಾರ ಸಂಭವಿಸಿದೆ.

ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗೆ ಇನ್ನೊಂದು ಬಸ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಚಿಗರಿ ಬಸ್‌ನ ಗಾಜುಗಳು ಪುಡಿ ಪುಡಿಯಾಗಿವೆ.

ಬ್ರೇಕ್ ೇಲ್ ಆಗಿದ್ದರಿಂದ ಈ ಘಟನೆ ಸಂಭವಿಸಿರಬಹುದು ಎಂದು ಹೇಳಲಾಗಿದೆ.

ಒಂದಲ್ಲ ಒಂದು ಅವಾಂತರಗಳಿಂದ ಸುದ್ದಿಯಲ್ಲಿರುವ ಚಿಗರಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಸುರಕ್ಷತೆ ಬಗ್ಗೆ ಆತಂಕ ಪಡುವಂತಾಗಿದೆ.