ಜಿಲ್ಲೆ

ಚಿಗರಿ ಬಸ್ ಗುದ್ದಿ ಗಂಭೀರ ಗಾಯ

ಮರಿದೇವ ಹೂಗಾರ

ಹುಬ್ಬಳ್ಳಿ: ಚಿಗರಿ ಬಸ್ ಗುದ್ದಿದ ಪರಿಣಾಮ ಪಾದಾಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿ ಶನಿವಾರ ನಡೆದಿದೆ.

ವೇಗವಾಗಿ ಬಂದ ಚಿಗರಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿ ಬಸಪ್ಪ ಬುಡ್ಡೇಕಲ್ಲಪ್ಪನವರ (48) ಕಾಲಿನ ಮೇಲೆ ಹಾಯ್ದು ಹೋಗಿದೆ. ಪರಿಣಾಮ ಪಾದಚಾರಿ ಕಾಲಿಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು, ಆತನನ್ನು ಕಿಮ್ಸ್​ಗೆ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೂರ್ವ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.