ಜಿಲ್ಲೆ

10 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

ಬೆಳಗಾವಿ: ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಜಿಲ್ಲೆಯಲ್ಲಿ 10 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.

ಇಲ್ಲಿನ ಮಾರ್ಕೆಟ್ ಠಾಣೆ ಇನ್‌ಸ್ಪೆಕ್ಟರ್‌ ಮಹಾಂತೇಶ ಧಾಮಣ್ಣವರ, ಡಿಸಿಆರ್‌ಇ ಇನ್‌ಸ್ಪೆಕ್ಟರ್‌ ಪ್ರಹ್ಲಾದ ಚನ್ನಗಿರಿ, ಘಟಪ್ರಭಾ ಠಾಣೆ ಇನ್‌ಸ್ಪೆಕ್ಟರ್‌ ಹಸನಸಾಬ್ ಮುಲ್ಲಾ, ಪೊಲೀಸ್ ಮೀಸಲು ಪಡೆ ಇನ್‌ಸ್ಪೆಕ್ಟರ್‌ ಕರೆಪ್ಪ ಗಂಜಿ, ಬೆಳಗಾವಿ ಮಹಿಳಾ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ರೋಹಿಣಿ ಪಾಟೀಲ, ಡಿಸಿಆರ್‌ಬಿ ಎಎಸ್‌ಐ ನಿಂಗಪ್ಪ ಶೆಟ್ಟೆಣ್ಣವರ, ಡಿಎಆರ್‌ನ ಎಆರ್‌ಎಸ್‌ಐ ಪಾಯನಗೌಡ ಪಾಟೀಲ, ಕೆಎಸ್‌ಆರ್‌ಪಿ 12ನೇ ಪಡೆಯ ಆರ್‌ಎಚ್‌ಸಿ ಸವಿತಾ ಹುಲ್ಲೂರ, ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಬಿ.ಎಸ್.ಪಾಟೀಲ, ನಗರ ಪೊಲೀಸ್ ಆಯುಕ್ತಾಲಯದ ಸಿಸಿಆರ್‌ಬಿ ವಿಭಾಗದ ಡಬ್ಲ್ಯು.ಎಫ್.ಮುಜಾವರ, ಅಥಣಿ ಠಾಣೆಯ ಜಮೀರ್‌ ಡಾಂಗೆ ಮುಖ್ಯಮಂತ್ರಿಗಳ ಪದಕ್ಕೆ ಭಾಜನವಾಗಿದ್ದಾರೆ.