ಜಿಲ್ಲೆ

"ವನ್ಯಜಿವಿ ಸಪ್ತಾಹ' ಮುಖ್ಯಮಂತ್ರಿಗಳಿಂದ ಬಹುಮಾನ

ರೇಷ್ಮೆ ನಗರ ಡೆಸ್ಕ್

ಕನಕಪುರ: ರಾಜ್ಯ ಅರಣ್ಯ ಇಲಾಖೆ 71ನೇ ವನ್ಯಜಿವಿ ಸಪ್ತಾಹದ ಪ್ರಯುಕ್ತ ಮಾನವ&ವನ್ಯಜಿವಿ ಸಹಬಾಳ್ವೆ ಧ್ಯೇಯ ವಾಕ್ಯದೊಂದಿಗೆ ಅ.2ರಿಂದ 7ರವರೆಗೆ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಆದಿತ್ಯಾ'ಸ್​ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ಮುಖ್ಯಮಂತ್ರಿಗಳಿಂದ ಬಹುಮಾನ ಪಡೆದೆರು.

ಪಿಯುಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರ್ಷಿಣಿ.ಆರ್​. ಪ್ರಥಮ ಸ್ಥಾನ, ಇಂಗ್ಲಿಷ್​ ಪ್ರಬಂಧ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಸ್ಲಿಂ.ಎಂ.ಐ ಪ್ರಥಮ ಸ್ಥಾನ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೃತಿಕಾ.ಎಲ್​.ಜಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಧಾನಸೌಧದ ಬ್ಲಾಂಕ್ವೆಟ್​ ಹಾಲ್​ನಲ್ಲಿ ಬುಧವಾರ ಜರುಗಿದ ಸಮಾರೋಪ ಸಮಾರಂಭದಲ್ಲಿ ಮೂವರು ವಿದ್ಯಾರ್ಥಿನಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಮತ್ತು ಬಹುಮಾನ ಸ್ವೀಕರಿಸಿದರು.