ಚಿಕ್ಕಜಾಜೂರು: ಕರೊನ ಸೋಂಕು ತಡೆಯಲು ಗ್ರಾಮ ಪಂಚಾಯಿತಿ ಹಲವು ನಿಯಮ ಜಾರಿ ಮಾಡಿದೆ ಗ್ರಾಪಂ ಅಧ್ಯಕ್ಷ ಡಿ.ಸಿ.ಮೋಹನ್ ಹೇಳಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತಾ ಕರ್ಫ್ಯೂ ಬೆಂಬಲಿಸಿ ಕರೊನಾ ತಡೆಗೆ ಜನತೆ ಸಹಕರಿಸಬೇಕು ಎಂದರು.
ಗ್ರಾಮದಲ್ಲಿರುವ ರೈಲು ನಿಲ್ದಾಣ ಬಳಿ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಜನತಾ ಕರ್ಫ್ಯೂಗೆ ವರ್ತಕರು, ಅಂಗಡಿ ಮುಚ್ಚುವ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು.
ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಜಯದೇವ ಮೂರ್ತಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯುವುದರಿಂದ ತಪಾಸಣೆಗೆ ಅನುಕೂಲವಾಗಲಿದೆ ಎಂದರು.
ಡಾ.ಪ್ರದೀಪ್‌ಕುಮಾರ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಮಹೇಶ್, ಕೃಷಿ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಯೋಗೇಶ್, ಪಿಎಸ್‌ಐ ಮೋಹನ್, ಪಶು ಸಂಗೋಪನ ಇಲಾಖೆಯ ಮರುಳಸಿದ್ದೇಶ್, ಪಿಡಿಒ ಪುನಿತ್ ಇತರರಿದ್ದರು.