ಸರಗೂರು: ಐಪಿಎಲ್ ಪಂದ್ಯಾವಳಿ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ಕೆಇಬಿ ಕಚೇರಿ ಪಕ್ಕದ ಧಮ್ ಬಿರಿಯಾನಿ ಅಂಗಡಿ ಮಾಲೀಕ, ಆರ್‌ಸಿಬಿ ಅಭಿಮಾನಿ ಶ್ಯಾಮ್ ಅವರು ವಿರಾಟ್ ಕೊಹ್ಲಿ ಮತ್ತು ಸಾಲ್ಟ್ ಫೋಟೋಗೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ ಸಾರ್ವಜನಿಕರಿಗೆ ಚಿಕನ್ ಬಿರಿಯಾನಿ ವಿತರಿಸಿದರು.
ನಂತರ ಮಾತನಾಡಿ, ಆರ್‌ಸಿಬಿ ಅಂದರೆ ಏನೋ ಖುಷಿ ಇದೆ. ಮ್ಯಾಚ್ ಗೆಲ್ಲಲ್ಲಿ ಅಥವಾ ಸೋಲಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಭಿಮಾನಿಗಳ ಸಪೋರ್ಟ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ಹೇಳಿದರು. ಮಾವ ಮಹದೇವ ಸಾಥ್ ನೀಡಿದರು.