ಮಾನ್ವಿ: ಚೀಕಲಪರ್ವಿ ಕ್ಯಾಂಪ್‌ನ ಪೇರಯ್ಯ ಎಂಬಾತ ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿಕೊಂಡು ಅನಧಿಕೃತ ಹತ್ತಿ ಬೀಜ ಮಾರಾಟ ವೇಳೆ ಸಹಾಯಕ ಕೃಷಿ ನಿರ್ದೇಶಕ ಬಿ. ಹುಸೇನಸಾಬ್ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ದಾಸ್ತಾನು ಬುಧವಾರ ವಶಪಡಿಸಿಕೊಂಡಿತು.
3.21 ಲಕ್ಷ ರೂ. ಮೌಲ್ಯದ 270 ಕೆಜಿಯ 602 ಹತ್ತಿ ಬೀಜದ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೃಷಿ ಅಧಿಕಾರಿಗಳಾದ ನಿಯಾಜ್ ಅಹ್ಮದ್, ವೆಂಕಣ್ಣ ಯಾದವ್ ಇದ್ದರು.