ಜಿಲ್ಲೆ

ಚಿಯಾ ಬೆಳೆಗೆ ಬೆಂಕಿ

ಪ್ರಸಿನ್ ಕೆ.ಆರ್

ಸರಗೂರು: ಕಟಾವು ಮಾಡಿದ್ದ ಚಿಯಾ ಬೆಳೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ರೈತ ನಷ್ಟ ಅನುಭವಿಸಿದ್ದಾನೆ.

ಹಳೇಹೆಗ್ಗುಡಿಲು ಗ್ರಾಮದ ನಿಂಗರಾಜು ಎರಡು ಎಕರೆ ಜಾಗದಲ್ಲಿ ಬೆಳೆದಿದ್ದ ಚಿಯಾ ಕಟಾವು ಮಾಡಿ ಜಮೀನಿನಲ್ಲೇ ರಾಶಿ ಹಾಕಿದ್ದರು. ಭಾನುವಾರ ರಾತ್ರಿ ಕಿಡಿಗೇಡಿಗಳು ಬೆಳೆಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಲಕ್ಷಾಂತರ ರೂ ಮೌಲ್ಯದ ಬೆಳೆ, ಪೈಪ್, ಟಾರ್ಪಲ್ ಸುಟ್ಟುಹೋಗಿದೆ.

ಈ ಬಗ್ಗೆ ಸರಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.