ಜಿಲ್ಲೆ

ಛತ್ರಪತಿ ಶಿವಾಜಿ ಪುತ್ಥಳಿ ಶೀಘ್ರ ಅನಾವರಣ

ಪ್ರಶಾಂತ ಹೂಗಾರ

ಸಂಬರಗಿ: ಗ್ರಾಮದಲ್ಲಿ ಶೀಘ್ರ 1 ಕೋಟಿ ರೂ. ವೆಚ್ಚದಲ್ಲಿ 11 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಲಾಗುವುದು ಎಂದು ಮುಖಂಡ ವಿನಾಯಕ ಬಾಗಡಿ ತಿಳಿಸಿದರು.

ಸಮೀಪದ ಮದಭಾವಿ ಗ್ರಾಮದಲ್ಲಿ ಸೋಮವಾರ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸತೀಶ್ ಭಂಟಿ ಪಾಟೀಲ ಅವರು ಕೊಲ್ಲಾಪುರದ ಡಾ.ಡಿ.ವೈ.ಪಾಟೀಲ ಟ್ರಸ್ಟ್ ವತಿಯಿಂದ 5 ಲಕ್ಷ ರೂ. ಧನ ಸಹಾಯ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಶಿವಗೌಡ ಕಾಗೆ, ಪಿಕೆಪಿಎಸ್ ಅಧ್ಯಕ್ಷ ನಿಜಗುಣಿ ಮಗದುಮ್ಮ, ಉಪಾಧ್ಯಕ್ಷ ಅಶೋಕ ಪೂಜಾರಿ, ಅಪ್ಪಾಸಾಹೇಬ ಚೌಗಲಾ, ಪ್ರವೀಣ ಭಂಡಾರೆ, ಸಂಜಯ ಅದಾಟೆ, ಸುಖದೇವ ಬಾಗಡಿ, ಯಶವಂತ ಪಾಟೀಲ, ತಾನಾಜಿ ಶಿಂಧೆ, ಸುರೇಶ ಖುಟ್ಟೆ, ಪೋಪಟ್ ನಿಕ್ಕಂ, ಬಂಡು ಜಾಧವ, ಉದಯ ಪವಾರ, ಅಶೋಕ ಸೂರ್ಯವಂಶಿ, ಡಿಎಸ್‌ಎಸ್ ಅಧ್ಯಕ್ಷ ಹನುಮಂತ ಕಾಂಬಳೆ, ಮಾರುತಿ ಗಾಡಿವಡ್ಡರ, ಪರಶುರಾಮ ರಾಜಮಾನೆ, ಕೇಶವ ಭಂಡಾರೆ, ಪಪ್ಪು ಶಿಂಧೆ, ರಮೇಶ ಕಾಂಬಳೆ, ಪಿಕೆಪಿಎಸ್ ಉಪಾಧ್ಯಕ್ಷ ಅಣ್ಣಪ್ಪ ಮೀಸಾಳ ಇತರರಿದ್ದರು.