ಜಿಲ್ಲೆ

ಛತ್ರಪತಿ ಶೌರ್ಯ, ರಾಷ್ಟ್ರಪ್ರೇಮ ಆದರ್ಶಪ್ರಾಯ

ಪ್ರಶಾಂತ ಹೂಗಾರ

ಮಾಂಜರಿ: ದೇಶ, ಧರ್ಮಕ್ಕಾಗಿ ಮಿಡಿಯುವ ಹೃದಯ ಮತ್ತು ಶತ್ರುವಿಗೆ ಸಿಡಿಯುವ ಕ್ರೋದವಿರುವ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಸಮೀಪದ ಶಿರಗಾವ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತ್ಯುತ್ಸವ ಹಾಗೂ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿ, ದೇಶಕ್ಕಾಗಿ ಮಡಿದ ಯೋಧರ ದಾರಿಯಲ್ಲಿ ನಡೆದು ಆದರ್ಶವಂತರಾಗಬೇಕು ಎಂದರು.

ನೇಜದ ನರಸಿಂಗೇಶ್ವರ ಸ್ವಾಮೀಜಿ ಮಾತನಾಡಿ, ಹಿಂದು ಧರ್ಮ ಪ್ರತಿಷ್ಠಾಪಿಸಿ, ನ್ಯಾಯ, ಸಮಾನತೆಗಳಿಗಾಗಿ ತನ್ನನ್ನೇ ಸಮರ್ಪಿಸಿಕೊಂಡ ಶಿವಾಜಿ ಮಹಾರಾಜರು ರಾಷ್ಟ್ರಪ್ರೇಮ ಯುವಕರಿಗೆ ಮಾದರಿ ಎಂದರು. ಸಂಪಾದನಾ ಮಠದ ಸಂಪಾದನಾ ಸ್ವಾಮೀಜಿ, ಶಾಸಕ ಗಣೇಶ ಹುಕ್ಕೇರಿ ಇತರರಿದ್ದರು.