ಜಿಲ್ಲೆ

ತಂತ್ರಜ್ಞಾನದ ನೆರವಿನಿಂದ ಭವ್ಯ ಭಾರತ ನಿರ್ಮಾಣ

Dharwada - Santosh Vaidya

ಹುಬ್ಬಳ್ಳಿ: ವಿದ್ಯಾರ್ಥಿಗಳು ತಂತ್ರಜ್ಞಾನದ ನೆರವಿನಿಂದ ಭವ್ಯ ಭಾರತ ನಿರ್ಮಾಣ ಮಾಡುವತ್ತ ಗಮನ ಹರಿಸಬೇಕು ಎಂದು ಲೇಖಕ ಪ್ರೊ. ರಾಜೇಶ ಹೊಂಗಲ ಹೇಳಿದರು.

ನಗರದ ಚೇತನ ಬಿಸಿಎ ಮಹಾವಿದ್ಯಾಲಯದ ಬಿಸಿಎ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬಿಸಿಎ ವಿದ್ಯಾರ್ಥಿಗಳು ಚಂದ್ರಯಾನದ ಯಶಸ್ಸಿನಿಂದ ಪ್ರೇರಿತರಾಗಿ ಎಂಸಿಎ ಅಧ್ಯಯನ ಮಾಡಿ ವಿಜ್ಞಾನಿಗಳಾಗುವ ಗುರಿ ಮತ್ತು ಛಲ ಹೊಂದಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಡಾ. ವಿಶ್ವನಾಥ ಕೊರವಿ, ವಿದ್ಯಾರ್ಥಿಗಳು ತಂತ್ರಜ್ಞಾನದ ಸದುಪಯೋಗ ಪಡಿಸಿಕೊಂಡು ಸಮಾಜ ಮುಖಿ ಕಾರ್ಯಗಳನ್ನು ಮಾಡಬೇಕು ಎಂದರು.

ಪ್ರಾಚಾರ್ಯ ಡಾ. ಅಶೋಕ ವಡಕಣ್ಣವರ್, ಡಾ. ಕೆ. ಸಿ. ಪಾಂಗಿ, ಪ್ರೊ. ಬಿ. ಎಫ್. ಗಾಮನಗಟ್ಟಿ, ಡಾ. ಪವನ ಅಪರಂಜಿ, ಡಾ. ಯಶೋದಾ ನಾಯಕ, ಡಾ. ಪ್ರಶಾಂತ ಗಾಮನಗಟ್ಟಿ , ಬಿಸಿಎ ವಿಭಾಗದ ಮುಖ್ಯಸ್ಥೆ ಪೊ›. ಶಿಲ್ಪಾ ಜಡಿಮಠ, ಪೊ›. ನಿಧಿ ದೇಶಪಾಂಡೆ, ಪೊ›. ಭಾರತಿ ಬಡಿಗೇರ, ಇತರರು ಇದ್ದರು.

ಪ್ರೊ. ಭಾಗ್ಯಶ್ರೀ ಬಳಿಗಾರ ನಿರೂಪಿಸಿದರು. ಪ್ರೊ. ಫಾತಿಮಾ ವಂದಿಸಿದರು.