ಜಿಲ್ಲೆ

ಚೆಟ್ಟಳ್ಳಿ ಕೊಡವ ಸಮಾಜ ಖಂಡನೆ

ಆದರ್ಶ್. ಎಂ.ಕೆ.

ಚೆಟ್ಟಳ್ಳಿ: ಕೊಡವ ಸಾಂಪ್ರದಾಯಿಕ ಉಡುಪನ್ನು ತೊಟ್ಟು ದೇವಾಲಯ ಪ್ರವೇಶಿಸ ಬಾರದೆಂದು ತಡೆಹೊಡಿದಲ್ಲದೆ ಕೊಡವರ ಮೇಲೆ ಹಲ್ಲೆ ಹಾಗೂ ಮಹಿಳೆಯರಿಗೆ ಹಲ್ಲೆಮಾಡಲು ಮುಂದಾಗಿರುವ ಘಟನೆಯನ್ನು ಚೆಟ್ಟಳ್ಳಿ ಕೊಡವ ಸಮಾಜ ತೀವ್ರವಾಗಿ ಖಂಡಿಸಿತ್ತೇವೆಂದು ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ತಿಳಿಸಿದ್ಧಾರೆ.

ಕುಲದೇವರಾದ ಇಗ್ಗುತಪ್ಪ ಹಾಗೂ ಕಾವೇರಿ ಮಾತೆಯ ಮಣ್ಣಿದ್ದು ಇಲ್ಲಿ ಕೊಡವರೇ ಮೂಲ ಜನಾಂಗವಾಗಿದೆ. ಕೊಡಗಿನ ಎಲ್ಲಾ ದೇವಾಲಯಗಳಲ್ಲಿ ಕೊಡವರಿಗೇ ಹೆಚ್ಚಿನ ಪ್ರಾಧಾನ್ಯತೆ ಇದೆ. ಹಾಗಿರುವಾಗ ಇಲ್ಲಿ ದೇಶದ್ರೋಹಿಗಳಂತೆ ವರ್ತಿಸುವ ಕೆಲವರು ಜನಾಂಗೀಯವಾಗಿ ಹಾಗೂ ರಾಜಕೀಯವಾಗಿ ಕೊಡವರನ್ನು ಅವಮಾನಿಸಿರುವುದು ಇಡೀ ಕೊಡವ ಜನಾಂಗಕ್ಕೆ ಮಾಡಿದ ಅವಮಾನ ಇಂತಹ ಘಟನೆಯನ್ನು ಚೆಟ್ಟಳ್ಳಿ ಕೊಡವ ಸಮಾಜ ಖಂಡಿಸುತಿದೆ ಎಂದರು.