ಸುಬ್ರಹ್ಮಣ್ಯ: ಬೌದ್ಧಿಕ ಅಭ್ಯುದಯಕ್ಕೆ ಚೆಸ್ ಪಂದ್ಯಾಟ ಅತ್ಯವಶ್ಯಕ. ಸ್ಪರ್ಧಾತ್ಮಕವಾದ ಆಧುನಿಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನದ ಅಭಿವೃದ್ಧಿಗೆ ಚೆಸ್ ತರಬೇತಿ ಅಡಿಗಲ್ಲಾಗಲಿದೆ ಎಂದು ಕುಕ್ಕುಜಡ್ಕ ಸಹಕಾರಿ ಸಂ ಮುಖ್ಯ ಕಾರ್ಯದರ್ಶಿ ಮೋಹನ್ ಪೊಯ್ಯೆಮಜಲು ಹೇಳಿದರು.
ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆಸಲಾಗುವ ಚೆಸ್ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಪ್ರಮುಖರಾದ ಚಂದ್ರಕಾಂತ್ ಮೊಟ್ಟೆಮನೆ, ಅಜಯ್, ತರಬೇತುದಾರ ರಮೇಶ್ ಕರಂಗಲಡ್ಕ, ಅಮರ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ, ಸದಸ್ಯರಾದ ರಾಜೇಶ್ ಉತ್ರಂಬೆ, ಸುನಿಲ್ ಅಮೆ ಮನೆ, ಮೋಹನ್ ಮುಕ್ಕೂರ್, ಸುಕೇಶ್ ಚಾರ್ವಾತ, ನವೀನ್ ಕಾಯರ, ಪ್ರಶಾಂತ್ ಮಾಲ್ತಾಜೆ, ತೃಪ್ತಿ ಬಾಳುಗೋಡು, ಹೇಮಾಶ್ರೀ ಅಜಯ್ ಮಾಲ್ತಾಜೆ, ಲಿಸ್ಸಿ ಸಂತೋಷ್ ಮೊದಲಾದವರಿದ್ದರು. ನಿರಂತ್ ದೇವಸ್ಯ ನಿರೂಪಿಸಿದರು. ಮೇ 12ರ ವರೆಗೆ ಚೆಸ್ ತರಬೇತಿ ನಡೆಯಲಿದೆ.