ಜಿಲ್ಲೆ

ಚೆಸ್​ ಪಂದ್ಯಾವಳಿ 10ರಂದು

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಇಂದ್ರಾಳಿ ಸ್ಕೂಲ್ ಆಫ್ ಲೈಫ್ ಸ್ಕಿಲ್ಸ್ ವತಿಯಿಂದ ಹುಬ್ಬಳ್ಳಿ ಧಾರವಾಡ ಇಂಟರ್ ಸ್ಕೂಲ್ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ಭವಾನಿನಗರದ ಭಾವದೀಪ ಶಿಕ್ಷಣ ಸಂಸ್ಥೆಯ ವಿಮಲಾ ಕುಲಕರ್ಣಿ ಸ್ಕೂಲ್ ನಲ್ಲಿ ನ. 10ರಂದು ಏರ್ಪಡಿಸಲಾಗಿದೆ.

5ನೇ ತರಗತಿ, ಆರರಿಂದ 9ನೇ ತರಗತಿ ಹಾಗೂ 10ರಿಂದ 12ನೇ ತರಗತಿ ವರೆಗಿನ ಮೂರು ವಿಭಾಗದಲ್ಲಿ ಬಾಲಕ, ಬಾಲಕಿಯರು ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದು.

20 ರೋಲಿಂಗ್ ಟ್ರೋಫಿ, 50ಕ್ಕೂ ಹೆಚ್ಚು ಆಕರ್ಷಕ ಟ್ರೋಫಿಗಳನ್ನು ವಿಜೇತರಿಗೆ ನೀಡಲಾಗುವುದು ಎಂದು ಶ್ರೀನಿವಾಸ ಇಂದ್ರಾಳಿ ತಿಳಿಸಿದ್ದಾರೆ.